0:00 ಎಲ್ಲರಿಗೂ ನಮಸ್ಕಾರ ನನ್ನ YouTube ಚಾನೆಲ್ ಗೆ ಸ್ವಾಗತ ಆತ್ಮೀಯರೇ ಮತ್ತು ವಿದ್ಯಾರ್ಥಿಗಳೇ ಶಿವಕೋಟ್ಯಾಚಾರ್ಯರು ಬರೆದಂತಹ ಒಡ್ಡಾರಾಧನೆಯಲ್ಲಿ ಬರುವಂತಹ 19 ಕಥೆಗಳಲ್ಲಿ ವಿದ್ಯುತ್ ಚೋರನೆಂಬ ಋಷಿಯ ಕಥೆಯು ಇದೆ ಈ ಕಥೆಯನ್ನ ಇವತ್ತು ನಿಮ್ಮ ಎದುರಿಗೆ ವಾಚನ ಮಾಡ್ತಾ ಇದ್ದೇನೆ ಜಂಬೂ ದ್ವೀಪದ ಭರತ ಕ್ಷೇತ್ರದಲ್ಲಿ ವಿದೇಹ ಎಂಬ ಹೆಸರುಳ್ಳಂತಹ ಒಂದು ನಾಡು ಇದೆ ಆ ನಾಡಿನಲ್ಲಿ ಮಿಥಿಳೆ ಎನ್ನುವಂತ ಒಂದು ಪಟ್ಟಣವಿತ್ತು ಅದನ್ನು ನು ಪದ್ಮರಥ ಎಂಬ ಅರಸನ ಸಂತತಿಯಿಂದ ಬಂದ ವಾಮರಥ ಎಂಬತ ಅರಸನು ಆಳುತ್ತಾ ಇದ್ದ ಅವನ ರಾಣಿಯ ಹೆಸರು ಬಂಧುಮತಿ ಅಂತೂ ಅವರು ತಮ್ಮ ತಮ್ಮ ಮೆಚ್ಚಿನ ವಿಷಯದ ಬಯಕೆಯ
0:47 ಸುಖಗಳನ್ನ ಅನುಭವಿಸುತ್ತ ಇರಲು ಹಲವು ಕಾಲ ಕಳೆಯುತ್ತದೆ ಆ ಪಟ್ಟಣದಲ್ಲಿ ಯಮದಂಡ ಎನ್ನುವಂತಹ ಒಬ್ಬ ತಳಾರ ತಳಾರ ಅಂದ್ರೆ ಕಾವಲ್ಗಾರ ತಳಾರ ಇದ್ದ ಮತ್ತು ವಿದ್ಯುತ್ಚೋರ ಎಂಬ ಕಳ್ಳನು ಕೂಡ ಇದ್ದ ಆತನು ಕಳವಿನ ಶಾಸ್ತ್ರಗಳಲ್ಲಿ ಬಹಳ ಪ್ರವೀಣನಾಗಿದ್ದನು ಜರುಭಿನಿ ಜರುಭಿನಿ ಅಂದ್ರೆ ಪ್ರತ್ಯಕ್ಷವಾಗುದು ಮತ್ತೆ ಮಾಯವಾಗುದು ಇದೊಂದು ವಿದ್ಯೆ ಸ್ತಂಭಿನಿ ಸ್ತಂಭಿನಿ ಅಂದ್ರೆ ಗತಿನಿರೋಧ ಇದು ಹಾಗೆ ಇರುವ ಹಾಗೆ ಮಾಡುವಂತದ್ದು ಮೋಹಿನಿ ಮೂರ್ಚೆ ಉಂಟು ಮಾಡುವಂತ ಒಂದು ವಿದ್ಯೆ ಹಾಗೆ ಸರ್ಶಿ ಅಂದ್ರೆ ವಿಷಪ್ರಯೋಗ ತಾಳೋದ್ಘಾಟಿನಿ
1:33 ವಿದ್ಯಾ ಅಂದರೆ ಬೀಗ ತೆಗೆಯುವಂತಹ ವಿದ್ಯೆ ಮಂತ್ರ ಪ್ರಯೋಗ ಚೂರ್ಣ ಚೂರ್ಣ ಅಂದ್ರೆ ಪುಡಿಯನ್ನ ಎರಚುವಂತದ್ದು ಯೋಗ ಯೋಗ ಅಂದ್ರೆ ವಂಚನೆ ಇಂದ್ರಜಾಲ ಗುಪ್ತ ಚಾರತ್ವ ಇವದ್ಯ ಇವೇ ಮೊದಲಾದಂತ ವಿದ್ಯೆ ಹಾಗೆ ಗುಳಿಗೆ ಅಂಜನ ಅಂಜನ ಹಾಕುವಂತದ್ದು ಕಣ್ಣಿಗೆ ಹಚ್ಚುವಂತಹ ಲೇಪನ ಇವೇ ಮೊದಲಾಗಿ ಈ ವಿದ್ಯೆಗಳನ್ನೆಲ್ಲ ಕಲಿತಂತಹ ಆ ವಿದ್ಯುತ್ಚೋರನು ರಾತ್ರಿಯಲ್ಲಿ ಕಳವು ಮಾಡುತ್ತಿದ್ದನು ಈ ಪಟ್ಟಣಕ್ಕೆ ಬಹಳ ದೂರದಲ್ಲಿ ಒಂದು ಪರ್ವತ ಇದೆ ಅಲ್ಲಿ ದೊಡ್ಡದಾದ ಒಂದು ಗುಹೆ ಇದೆ ವಿದ್ಯುತ್ಚೋರನು ಕಳವು ಮಾಡಿದಂತಹ ಆ ಹೊನ್ನುಗಳನ್ನೆಲ್ಲ ಆ ಗುಹೆಯ
2:20 ಒಳಗೆ ಊತಿಟ್ಟು ಗುಹೆಯ ಬಾಗಿಲನ್ನು ದೊಡ್ಡದಾದ ಒಂದು ಬಂಡೆಕಲ್ಲನ್ನು ತಂದು ಇಟ್ಟು ಮುಚ್ಚಿ ಮುಚ್ಚಿ ಅನಂತರ ಹಗಲೆಲ್ಲ ಹಾಳು ದೇವಾಲಯದಲ್ಲಿ ಅಂಜನ ಹಚ್ಚಿ ತಾನು ತೊನ್ನು ರೋಗದವನಾಗಿ ಕಾಣಿಸಿಕೊಳ್ಳುತ್ತಿದ್ದ ಮುದುಡಿದ ಕೈಕಾಲುಗಳು ಉಳ್ಳವನಾಗಿ ಮೂಗು ಒಳಗೆ ಕುಸಿದು ಕೀವು ಸುರಿಯುತ್ತಿರಲು ನೊಣಗಳು ಕವಿದುಕೊಂಡು ತಿನ್ನುತ್ತಿರಲು ಅಸಹ್ಯ ಪಟ್ಟುಕೊಂಡ ಜನರ ಮನೆಗಳಿಗೆ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದನು ಮನೆಮನೆಗಳಿಗೆ ಸುತ್ತಾಡುತ್ತಾ ತನಗೆ ತೊನ್ನುರೋಗ ಬಂದಿರುವುದನ್ನು ತಿಳಿಸುತ್ತಾ ಹೀಗೆ ಹಗಲೆಲ್ಲ ಇರುತ್ತಿದ್ದನು ರಾತ್ರಿಯಾಗುವ ವೇಳೆಗೆ ದಿವ್ಯವಾದ
3:06 ತನ್ನ ಸ್ವಾಭಾವಿಕವಾದ ಹಿಂದಿನ ರೂಪವನ್ನು ಧರಿಸುತ್ತಿದ್ದನು ವಸ್ತ್ರವನ್ನು ಉಟ್ಟು ಸುಗಂಧ ಲೇಪನವನ್ನು ಮಾಡಿ ಹೂವನ್ನು ಮುಡಿದು ಕರ್ಪೂರದಿಂದ ಬೆರಕೆಯಾದ ತಾಂಬೂಲವನ್ನು ತಿನ್ನುತ್ತ ಸೂಳೆಯರ ಬೀದಿಗಳಲ್ಲಿ ಸುತ್ತಾಡಿ ತನ್ನನ್ನು ಮೆರೆಯಿಸುತ್ತ ತನ್ನ ಮನಸ್ಸಿಗೆ ಬಂದ ಶ್ರೇಷ್ಠ ಷ್ಠರಾದ ಒಳ್ಳೆಯ ಹೆಂಗಸರಲ್ಲಿ ಮುಂಗಡವಾಗಿ ಹಣವನ್ನು ಕೊಟ್ಟು ವಿಧವಿಧವಾದ ಸುಖ ಭೋಗಗಳಿಗಾಗಿ ಹೊನ್ನನ್ನು ಕೊಟ್ಟು ಸುಖವನ್ನು ಅನುಭವಿಸುತ್ತ ಯಾರು ತಿಳಿಯದ ಹಾಗೆ ಇದ್ದನು ವೈಶ್ಯರು ಬಟ್ಟೆಯ ವ್ಯಾಪಾರಿಗಳು ಅಕಾರಿಗಳು ಹೆಚ್ಚು ಹಣ ತೆಗೆದುಕೊಳ್ಳುವವರಾದ ತೆಗೆದುಕೊಳ್ಳುವ ಸೂಳೆಯರು ಸಾಮಂತರು ಇವರ ದ್ರವ್ಯಗಳನ್ನೆಲ್ಲ ಕದ್ದುಕೊಳ್ಳುತ್ತಾನೆ
3:52 ಮತ್ತೊಂದು ದಿವಸ ಅಚ್ಯುತೇ ಇದ್ರರು ಪದ್ಮರಥನಿಗೆ ಪ್ರೀತಿಯಿಂದ ಕಳುಹಿಸಿದ ದಿವ್ಯವಾಗಿ ಇರುವಂತಹ ಸರ್ವ ರುಜಾಪಹಾರ ಅಂದ್ರೆ ಎಲ್ಲಾ ರೋಗಗಳನ್ನು ನಾಶ ಮಾಡುವಂತದ್ದು ಈ ಹೆಸರುಳ್ಳಂತಹ ಮತ್ತು ವಂಶ ಪರಂಪರೆಯಿಂದ ವಾಮರಥನಿಗೆ ಬಂದಿದ್ದ ಮಾಲೆಯನ್ನು ವಾಮರಥನು ತನ್ನ ಅರಮನೆಯ ಏಳನೆಯ ಉಪ್ಪರಿಗೆಯ ನೆಲೆಯಲ್ಲಿ ತಾನು ಮಲಗುವ ಕೊಟ್ಟಡಿಯಲ್ಲಿ ಇದ್ದಂತಹ ಪೆಟ್ಟಿಗೆಯಲ್ಲಿ ಇಟ್ಟು ಎಲ್ಲಾ ಕಾಲದಲ್ಲಿಯೂ ಗಂಧ ಪುಷ್ಪ ದೀಪ ಧೂಪ ಅಕ್ಷತೆಗಳಿಂದ ಪೂಜಿಸುತ್ತ ಸಾಷ್ಟಾಂಗ ವಂದಿಸುತ್ತಾ ಇರುತ್ತಿದ್ದ ಹೀಗಿರುವಾಗ ಆ ಮಾಲೆಯನ್ನು ವಿದ್ಯುತ್ಚೋರನು ಕದ್ದನು ಅವನು
4:41 ತನ್ನ ಕಣ್ಣಿಗೆ ಅಂಜನ ಹಚ್ಚಿ ಯಾರು ತನ್ನನ್ನು ಕಾಣದ ಹಾಗೆ ಅರಮನೆಯನ್ನು ಹೊಕ್ಕು ಅರಸನು ನಿದ್ರಿಸುವ ಕೊಟ್ಟಡಿಯನ್ನು ಹೊಕ್ಕು ಅವನ ತಲೆಯ ಕಡೆ ಪೂಜೆ ಮಾಡಿ ಇಟ್ಟಿದ್ದ ಪೆಟ್ಟಿಗೆಯನ್ನು ತೆರೆದು ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರಟು ಹೋಗಿ ಪಟ್ಟಣದ ಹೊರಗಿನ ಗುಹೆಯಲ್ಲಿ ಹೂಳಿಟ್ಟು ಪಟ್ಟಣಕ್ಕೆ ಬಂದು ಹಿಂದಿನ ಹಾಗೆ ತುನ್ನುರೋಗಿಯ ರೂಪವನ್ನು ತಾಳಿಕೊಂಡಿದ್ದ ಆಮೇಲೆ ಇತ್ತ ರಾಜ ವಾಮರಥನು ಸೂರ್ಯನು ಉದಯಿಸುವ ವೇಳೆಗೆ ಮಾಲೆಯನ್ನು ಕಾಣದೆ ಆಸ್ಥಾನ ಮಂಟಪಕ್ಕೆ ಬಂದು ಸಿಂಹಾಸನದ ಮೇಲೆ ಕುಳಿತನು ನಗರದ ಕಾವಲುಗಾರನಾದ ಯಮದಂ ದಂಡನ ಬಳಿಗೆ ದೂತನನ್ನು ಕಳುಹಿಸಿ ಅವನನ್ನು ಬರಮಾಡಿ ಅವನೊಡನೆ
5:29 ಹೀಗೆಂದನು ಎಲವೋ ಯಮದಂಡ ನಮ್ಮ ಪಟ್ಟಣದ ಬ್ರಾಹ್ಮಣರು ವರ್ತಕರು ವೇಷ್ಯೆಯರು ಒಕ್ಕಲಿನವರ ಮಕ್ಕಳು ಮುಂತಾದವರ ಹೊನ್ನನ್ನೆಲ್ಲ ಕದ್ದರು ನೀನು ವಿಚಾರಿಸದೆ ಸುಮ್ಮನಿರವೆಯಲ್ಲ ನನ್ನ ಮಲಗುವ ಮನೆಯ ಕೊಟ್ಟಡಿಯನ್ನು ಕಳ್ಳನು ನುಗ್ಗಿ ಪೆಟ್ಟಿಗೆ ತೆರೆದು ಅಚ್ುತೇಂದ್ರನು ಕೊಟ್ಟ ಕುಲಧನವಾಗಿರುವ ಮಾಲೆಯನ್ನು ಕೊಂಡುಹೋಗಿದ್ದಾನೆ ಕಳ್ಳನನ್ನು ಕಂಡುಹಿಡಿದು ಮಾಲೆಯನ್ನು ತೆಗೆದು ತೆದುಕೊಂಡು ಬಾ ಅದೆಲ್ಲವಾದರೆ ಕಳ್ಳನಿಗೆ ತಕ್ಕದಾದ ದಂಡನೆಯನ್ನು ನಿನಗೆ ಮಾಡುತ್ತೇನೆ ಹೀಗೆ ರಾಜನು ಹೇಳಿದಾಗ ಯಮದಂಡನು ಪ್ರಭುವೇ ನನಗೆ ಏಳು ದಿವಸದ ಸಮಯವನ್ನು ಕೊಡಬೇಕು ಏಳು ದಿವಸದ ಒಳಗಾಗಿ ಕಳ್ಳನನ್ನು ಕಂಡುಹಿಡಿಯಲು ಸಾಧ್ಯವಾಗದೆ ಹೋದರೆ ಪ್ರಭುಗಳು ನನ್ನನ್ನು ಏನು ಬೇಕು ಹಾಗೆ ಮಾಡಬಹುದು ಎಂದನು
6:16 ಅದಕ್ಕೆ ರಾಜನು ಹಾಗೆಯೇ ಮಾಡು ಎಂದನು ಯಮದಂಡನು ಅರಮನೆಯಿಂದ ಹೊರಟುಪಟ್ಟಣ ದಲ್ಲಿ ಸೂಳೆಯರ ಬೀದಿಗಳಲ್ಲಿಯೂ ಅಂಗಡಿಗಳಲ್ಲಿಯೂ ಜಿನಾಲಯಗಳಲ್ಲಿಯೂ ವಿನೋದ ವಾಟಿಕೆಗಳಲ್ಲಿಯೂ ಬೇದಿಗಳಲ್ಲಿಯೂ ಉದ್ಯಾನಗಳಲ್ಲಿಯೂ ದೇವಾಲಯಗಳಲ್ಲಿಯೂ ಪಟ್ಟಣದ ಹೊರಗಡೆಯಲ್ಲಿಯೂ ಅಕ್ಕಪಕ್ಕದ ಪಟ್ಟಣಗಳಲ್ಲಿಯೂ ಆರು ದಿವಸ ಎಳೆಬಿಡದೆ ವಿಚಾರಿಸಿದನು ಎಲ್ಲಿಯೂ ಕಳ್ಳ ಕಾಣಲಿಲ್ಲ ಏಳನೆಯ ದಿವಸದಂದು ಹಾಳು ದೇವಾಲಯದಲ್ಲಿದ್ದು ತೊನ್ನನು ಹೋಗುವಾಗ ಕೆಸರಿನ ಹಳ್ಳವನ್ನು ಕಂಡು ವಿದ್ಯಾಧರರು ವಿದ್ಯಾಬಲದಿಂದ ಹಾರಿ ದಾಟಿ ಹೋಗುವುದನ್ನು ಯಮದಂಡನು ದೂರದಲ್ಲಿದ್ದು ಕಂಡನು ಇವನೇ ಕಳ್ಳನು ಎಂದು ನಿರ್ಣಯಿಸಿ ಅವನನ್ನು ಹಿಡಿದನು ಕಳ್ಳನು
7:04 ಕೂಗಿಕೊಳ್ಳುತ್ತಿದ್ದಂತೆಯೇ ಅವನನ್ನು ಅರಮನೆಗೆ ಕೊಂಡುಹೋಗಿ ಕಳ್ಳನನ್ನು ಹಿಡಿದುಕೊಂಡು ಬಂದಿದ್ದೇನೆ ಎಂದು ಅರಸನಿಗೆ ತೋರಿಸಿ ಈತನು ಕಳ್ಳನು ಎಂದು ಅರಸನಿಗೆ ಹೇಳಿದನು ಆಗ ತೊನ್ನನು ಹೀಗೆಂದನು ದೇವ ನಾನು ಕಳ್ಳನಲ್ಲ ಎಂಬುದನ್ನು ಈ ಪಟ್ಟಣವೆಲ್ಲವೂ ತಿಳಿದಿದೆ ಈ ತಳಾರನು ಕಳ್ಳನನ್ನು ಕಂಡುಹಿಡಿಯಲು ಅಸಮರ್ಥನಾಗಿ ತನ್ನ ಸಾವಿಗೆ ಹೆದರಿ ಬಡವನು ದಿಕ್ಕಿಲ್ಲದವನು ಪಟ್ಟಣದಲ್ಲಿ ಭೀಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಜೀವಿಸುತ್ತಿರುವವನು ಆದ ನನ್ನನ್ನು ಹಿಡಿದುಕೊಂಡು ಬಂದು ಕೊಲ್ಲಿಸುತ್ತಿದ್ದಾನೆ ಎನ್ನಲು ತಳಾರನು ಕಳ್ಳರನ್ನು ಕಂಡುಹಿಡಿಯುವ ಶಾಸ್ತ್ರಗಳಲ್ಲಿ ಬಹು ಪ್ರವೀಣನಾಗಿರುವುದರಿಂದ ರಾಜನಿಗೆ ಹೀಗೆಂದನು ಈತನು ತನ್ನ ರೂಪವನ್ನು
7:49 ಮರೆಮಾಡಿ ರಾತ್ರಿಯ ವೇಳೆ ಪಟ್ಟಣದಲ್ಲೆಲ್ಲಕ ಕಳವು ಮಾಡಿ ಹಗಲಿನ ವೇಳೆ ಈ ರೀತಿಯಾಗಿ ತೊನ್ನನಂತೆ ಕಾಣಿಸುತ್ತಿರುವನು ನೀವು ನಂಬುವುದಿಲ್ಲವಾದರೆ ನಂಬಿಕೆ ಬರುವಂತೆ ಮಾಡಿ ತೋರಿಸುವೆನು ಹೀಗೆ ಹೇಳಿ ಯಮದಂಡನು ಆಗಲೇ ವಿರುದ್ಧವಾದ ಗುಳಿಗೆ ಕಾಡಿಗೆಗಳನ್ನು ತೊನ್ನಿನ ಕಣ್ಣಿಗೆ ಹಚ್ಚಿದನು ಆಗ ದಿವ್ಯವಾದ ತನ್ನ ಹಿಂದಿನ ರೂಪಗೊಂಡು ಈತನು ಗುಳಿಗೆ ಅಂಜನಗಳ ಕಪಟವನ್ನು ಇಂದ್ರಜಾಲಗಳನ್ನು ಬಲ್ಲವನಾಗಿರುವುದರಿಂದ ಯಾವರೂ ಯಾವ ರೂಪವನ್ನು ಬೇಕಾದರೂ ಮಾಡಬಲ್ಲನು ಎಂದನು ಆಗ ತಳಾರನು ಇದನ್ನು ನಾನು ಬೇರೆಯವರಿಗೆ ಮಾಡಿ ನಂಬಿಕೆಯನ್ನು ಉಂಟು ಮಾಡುವೆನು ಎಂದು ಹೇಳಿ ರಾಜನ ಒಪ್ಪಿಗೆಯಿಂದ ರಾಣಿಯರ ಮತ್ತು ಸೇವಕಿಯರ
8:35 ಕಣ್ಣುಗಳಿಗೆ ಗುಳಿಗೆ ಅಂಜನಗಳನ್ನು ಹಚ್ಚಿದನು ಆಗ ಅವರೆಲ್ಲರೂ ತೊನ್ನುರೋಗದವರಾಗಿ ಕಾಣಿಸಿದರು ಹೀಗಿರಲು ಮತ್ತೆ ವಿರುದ್ಧದ ಗುಳಿಗೆ ಅಂಜನಗಳನ್ನು ಹಚ್ಚಿದಾಗ ಸಹಜವಾದ ತಮ್ಮ ಹಿಂದಿನ ರೂಪಗಳನ್ನು ನ್ನ ತಾಳಿದರು ಆಗ ರಾಜನಿಗೆ ನಂಬಿಕೆಯಾಯಿತು ಇವನು ಸ್ಪಷ್ಟವಾಗಿ ಕಳ್ಳನಾಗಿರುತ್ತಾನೆ ಇವನನ್ನು ದಂಡಿಸು ಎಂದು ರಾಜನು ಯಮದಂಡನಿಗೆ ಆಜ್ಞೆ ಮಾಡಿದನು ತಳಾರನು ಹಾಗೆಯೇ ಮಾಡುವೆನು ಎಂದು ವಿದ್ಯುತ್ಚೋರನನ್ನು ತನ್ನ ಮನೆಗೆ ಕರೆದುಕೊಂಡು ಹೋದನು ಮಾಘ ಮಾಸದ ಚಳಿಯುಳ್ಳ ರಾತ್ರಿಯಲ್ಲಿ ಕಡುತಂಪಿನಲ್ಲಿ ಭಯಂಕರವಾದ 32 ವಿಧದ ಶಿಕ್ಷೆಗಳಿಂದ ಅತಿಶಯವಾಗಿ ದಂಡಿಸಿದನು ಕಳ್ಳನು ಕೂಗಿ ಬೊಬ್ಬಿಡುತ್ತಿದ್ದನು
9:23 ಅಯ್ಯೋ ನಾನು ಕಳ್ಳನಲ್ಲ ತಳಾರನು ನನ್ನನ್ನು ತನ್ನ ಬಲದರ್ಪದಿಂದ ಕೊಲ್ಲುತ್ತಿದ್ದಾನೆ ಎಂದು ಆತ ಬೊಬ್ಬಿಡುತ್ತಿದ್ದ ಇದರಿಂದ ಈತನು ಕಳ್ಳನಲ್ಲವೆಂದು ತಳಾರನಿಗೆ ನಂಬಿಕೆ ಉಂಟಾಗಿ ಸೂರ್ಯೋದಯವಾದೊಡನೆ ಅರಮನೆಗೆ ಹೋಗಿ ಅರಸನಿಗೆ ಹೀಗೆ ಭಿನ್ನವಿಸಿದನು ದೇವ ನಾನು ಕಳ್ಳನನ್ನು 32 ಬಗೆಯ ಉಗ್ರ ಶಿಕ್ಷೆಗಳಿಂದ ದಂಡಿಸಿ ನೋಡಿದೆನು ಆತನು ಆತನು ನಿಶ್ಚಯವಾಗಿಯೂ ಕಳ್ಳನಲ್ಲ ಪ್ರಭುವು ನನ್ನನ್ನು ಬೇಕಾದಂತೆ ಮಾಡಬಹುದು ಎಂದನು ಆಗ ರಾಜನು ಯಮದಂಡನನ್ನು ಸ್ಮಶಾನದ ಶೂಲಕ್ಕೆ ಹಾಕಿ ಎಂದು ಸೇವಕರಿಗೆ ಆಜ್ಞೆ ಮಾಡಿದನು ಅವರು ಯಮದಂಡನನ್ನು ಸ್ಮಶಾನಕ್ಕೆ ಎಳೆದುಕೊಂಡು ಹೋದರು ಶೂಲದ ಮೊಳೆಯನ್ನು ಹರಿತ ಮಾಡಿ ಶೂಲದಲ್ಲಿ
10:09 ಅವನನ್ನು ಹಾಕುವಾಗ ತೊನ್ನನು ಅವರೊಡನೆ ಹೋಗಿ ರೂಪಾಂತರ ವಿದ್ಯೆಯಿಂದ ತನ್ನ ರೂಪವನ್ನು ಪರಿವರ್ತನೆಗೊಳಿಸಿ ತನ್ನ ಸ್ವಾಭಾವಿ ಭಾವಿಕವಾದ ವಿದ್ಯಚೋರನಾಗಿರುವ ದಿವ್ಯ ರೂಪವನ್ನು ತಾಳಿಕೊಂಡು ಬಂದು ಯಮದಂಡನನ್ನು ಶೂಲಕ್ಕೆ ಹಾಕಲು ಬಿಡದಂತೆ ಅಡ್ಡವಾಗಿ ನಿಂತು ರಾಜನ ಕಾವಲುಗಾರನೊಡನೆ ಹೀಗೆ ಹೇಳಿದನು ಎಲೈ ಅಣ್ಣಂದಿರ ನೀವು ಇವನನ್ನು ಕೊಂದಿರಿ ಈತನು ಶೂಲಕ್ಕೆ ಹಾಕಲ್ಪಟ್ಟವನಾಗಿ ಸುತ್ತವನಾಗಿದ್ದಾನೆ ಎಂದು ಅವರಲ್ಲಿ ಹೇಳಿ ತಳಾರನೊಡನೆ ಹೀಗೆಂದನು ಎಲೈ ಯಮದಂಡ ನಿನಗೆ ತಿಳಿಯಿತೆ ನೀನು ನಾನು ಚಿಕ್ಕನಿನಲ್ಲಿ ಒಬ್ಬರೇ ಉಪಾಧ್ಯಾಯರ ಬಳಿ ವಿದ್ಯಾಭ್ಯಾಸ ಮಾಡುವಂದು ನಂದನ ಎಂಬ
10:54 ಉದ್ಯಾನದಲ್ಲಿ ನಾನು ಶಪಥ ಮಾಡಿದದನ್ನು ನೀನು ನೆನಪಿನಲ್ಲಿ ಇಟ್ಟಿರುವೆಯ ಅದರಂತೆ ಒಂದು ದೋಷವಿಲ್ಲದೆ ನಿನ್ನನ್ನು ನಾನು ಕೊಲಿಸಿದೆನೋ ಕೊಲಿಸಲಿಲ್ಲವೋ ಮಾಡಿದ ಪ್ರತಿಜ್ಞೆಯನ್ನು ಸ್ಮರಿಸುವೆಯೋ ಸ್ಮರಿಸುವುದಿಲ್ಲವೋ ಎಂದು ಕೇಳಿದನು ಯಮದಂಡನು ಚೆನ್ನಾಗಿ ನೆನಪಿಟ್ಟುಕೊಂಡಿರುವೆನು ನಾನು ಸೋತವ ನು ಸತ್ತವನು ಆಗಿರುವೆನು ಎಂದು ಇಬ್ಬರು ಒಗಟಿನಂತಹ ರೀತಿಯಿಂದ ಹೇಳುವ ಉತ್ತರ ಪ್ರತ್ಯುತ್ತರಗಳನ್ನು ಕಾವಲಿನವರು ಪಟ್ಟಣದ ಜನರು ಕೇಳಿ ಆಶ್ಚರ್ಯಪಟ್ಟು ಬೆರಗಾಗಿದ್ದರು ವಿದ್ಯೆಚೋರನು ಕಾವಲು ಕಾವಲುಗಾರರೊಡನೆ ನೀವು ನನ್ನನ್ನು ಇವನನ್ನು ಅರಸರಲ್ಲಿಗೆ ಕೊಂಡುಹೋಗಿರಿ ಅರಸನ ಮುಂದೆ ಈತನಿಗೂ ನನಗೂ
11:42 ಹೇಳತಕ್ಕ ಮಾತಿದೆ ಅಲ್ಲಿ ನಾವು ಮಾತನಾಡಿದ ನಂತರ ರಾಜನು ಇವನನ್ನು ತನಗೆ ಮೆಚ್ಚಿದಂತೆ ಮಾಡುವನು ಹೇಗಿದ್ದರೂ ಕೊಲ್ಲಲು ಆಜ್ಞಾಪಿಸಿದರು ಮೂರು ಬಾರಿ ಕೇಳದೆ ಕೊಲ್ಲಬಾರದು ಎಂದು ನೀತಿಶಾಸ್ತ್ರದಲ್ಲಿ ಹೇಳಿರುವುದರಿಂದ ನಮ್ಮಿಬ್ಬರನ್ನು ಅರಮನೆಗೆ ಕೊಂಡುಹೋಗಿ ಅರಸನಿಗೆ ತೋರಿಸಿರಿ ಎಂದನು ಅದರಂತೆ ಕಾವಲುಗಾರರು ಇಬ್ಬರನ್ನು ಅರಸನಲಿಗೆ ಕೊಂಡುಹೋಗಿ ಈ ರೀತಿಯಾಗಿ ವಿಜ್ಞಾಪನೆ ಮಾಡಿದರು ದೇವ ಈತನು ಯಮದಂಡನನ್ನು ಕೊಲ್ಲಲು ಬಿಡದೆ ನಮ್ಮನ್ನು ತಡೆದನು ಎಂದು ವಿದ್ಯುತ್ಚೋರನನ್ನು ತೋರಿಸ ಹೇಳಿದನು ಆಗ ಆಗ ರಾಜನು ನೀನು ಯಾಕೆ ತಡೆದೆ ಎಂದು ಕೇಳಲು ವಿದ್ಯುತ್ಚೋರನು ಹೀಗೆ ಹೇಳಿದನು ಯಮದಂಡನಲ್ಲಿ ಯಾವುದೊಂದು ತಪ್ಪಾಗಲಿ ದೋಷವಾಗಲಿ ಇಲ್ಲ
12:28 ನಿಮ್ಮದಾಗಿರುವ ದೇವತೆಗಳಿಂದ ರಕ್ಷಿಸಲ್ಪಡುವ ಸರ್ವರುಜಾಪಹಾರ ಎಂಬ ಮಾಲೆಯೇ ಮುಂತಾಗಿ ಪಟ್ಟಣದ ಹೊನ್ನನ್ನು ರಾತ್ರಿಯಲ್ಲಿ ಈ ರೂಪದಲ್ಲಿ ನಾನೇ ಕಳವು ಮಾಡಿ ಹಗಲೆಲ್ಲ ತೊನ್ನು ರೋಗದವನಂತೆ ಕಾಣಿಸಿಕೊಂಡು ಹೊನ್ನನ್ನೆಲ್ಲ ಪಾಳುಬಿದ್ದ ದೇವಾಲಯದಲ್ಲಿ ಇರುತ್ತೇನೆ ಆದ್ದರಿಂದ ನನ್ನನ್ನು ಕೊಲ್ಲಿರಿ ಈತನಲ್ಲಿ ಏನು ದೋಷವಿಲ್ಲ ವಿದ್ಯಚೋರನು ಹೀಗೆನ್ನಲು ರಾಜನು ಅವನೊಡನೆ ಆ ಕದ್ದುಕೊಂಡಂತಹ ಹೊನ್ನನ್ನು ಏನು ಮಾಡಿದೆ ಎಂದು ಕೇಳಿದ ವಿದ್ಯಚೋರನು ಅಷ್ಟು ಇದ್ದವು ಅವುಗಳಲ್ಲಿ 5ಸಾವಿರಆಸಾವಿರ ದೀನಾರ ನಾಣ್ಯ ನನ್ನ ಸೂಳೆಗೆ ಕೊಟ್ಟು ವೆಚ್ಚವಾಗಿದೆ ಉಳಿದದೆಲ್ಲ ಬಣ್ಣವಳೆಯದೇ ಇದೆ ಎಂದು ಹೇಳಿದನು ರಾಜನು ವಿದ್ಯುತ್ಚೋರನೊಂದಿಗೆ ಹಾರವನ್ನು ತೆಗೆದುಕೊಂಡು ಬಾ ಪಟ್ಟಣಿಗರಿಗೆ
13:15 ಹೊನ್ನ ನ್ನನ್ನು ಇಟ್ಟ ಸ್ಥಳವನ್ನು ತೋರಿಸು ಎಂದು ಹೇಳಿ ಆತನೊಂದಿಗೆ ಪಟ್ಟಣದ ಜನರನ್ನು ಕಳುಹಿಸಿದನು ವಿದ್ಯಚೋರನು ಕಾವಲ್ನವರೊಂದಿಗೆ ಹೋದನು ಆ ಪಟ್ಟಣಕ್ಕೆ ಬಹಳ ದೂರದಲ್ಲಿ ದೊಡ್ಡದೊಂದು ಬೆಟ್ಟವಿದೆ ಆ ಬೆಟ್ಟದಲ್ಲಿ ಒಂದು ವಿಶಾಲವಾದ ಗವಿ ಇದೆ ಅದರ ಬಾಗಿಲನ್ನು ದೊಡ್ಡ ಕಲ್ಲಿನಿಂದ ಮುಚ್ಚಿತ್ತು ವಿದ್ಯುತ್ಚೋರನು ಆ ಕಲ್ಲನ್ನು ತೆಗೆದು ಅದರ ಒಳಗೆ ಹೊಕ್ಕು ಮಾಲೆಯನ್ನು ತಂದು ಪಟ್ಟಣದ ಜನರನ್ನೆಲ್ಲ ಉದ್ದೇಶಿಸಿಹ ಹೀಗೆ ಹೇಳಿದನು. ನಿಮ್ಮ ನಿಮ್ಮದಾಗಿರುವ ದ್ರವ್ಯ ಯಾವುದೆಂದು ಪರಿಶೀಲಿಸಿ ಒಬ್ಬರದು ಮತ್ತೊಬ್ಬರಿಗೆ ಆಗದಂತೆ ನೋಡಿಕೊಳ್ಳಿ ಎಂದು ತೋರಿಸಿದನು. ಅವರು ತಮ್ಮ ತಮ್ಮ ದ್ರವ್ಯವೆಲ್ಲವನ್ನು ಪರೀಕ್ಷಿಸಿ ನೋಡಿ ತೆಗೆದುಕೊಂಡರು. ಆಮೇಲೆ ವಿದ್ಯುತ್ಚೋರನು ಮಾಲೆಯನ್ನು ತೆಗೆದುಕೊಂಡು ಹೋಗಿ ರಾಜನಿಗೆ
14:02 ಒಪ್ಪಿಸಿದನು. ಆಗ ರಾಜನು ವಿದ್ಯುತ್ಚೋರನೊಡನೆ ನೀನು ಮಾಘಮಾಸದ ರಾತ್ರಿಯ ಶೀತದಲ್ಲಿ ನಾಲ್ಕು ಜಾವದಷ್ಟು ಹೊತ್ತು 32 ವಿಧವಾದ ಕಠಿಣವಾದ ಶಿಕ್ಷೆಯನ್ನು ಹೇಗೆ ಸಹಿಸಿಕೊಂಡೆ ಎಂದು ಕೇಳಲು ಅವನು ಅರಸನಿಗೆ ಹೀಗೆಂದನು ದೇವ ನಾನು ಚಿಕ್ಕವನಾಗಿದ್ದಾಗ ನನಗೆ ಉಪಾಧ್ಯಾಯರು ನಾನು ಸಹಸ್ರಕೂಟ ಜಿನಾಲಯಕ್ಕೆ ನಾವಿಬ್ಬರು ಹೋಗಿದ್ದೇವು ನನ್ನ ಉಪಾಧ್ಯಾಯರು ದೇವರನ್ನು ನಮಸ್ಕರಿಸುತ್ತಿದ್ದಾಗ ಪುರಾಣಗಳನ್ನು ನ್ನು ವ್ಯಾಖ್ಯಾನ ಮಾಡುತ್ತಿದ್ದ ಶಿವಗುಪ್ತರೆಂಬ ಆಚಾರ್ಯರ ಬಳಿಯಲ್ಲಿ ನಾನು ಕುಳಿತು ವ್ಯಾಖ್ಯಾನವನ್ನು ಕೇಳುತ್ತಿದ್ದೇನು ಈ ಸಂದರ್ಭದಲ್ಲಿ ಆ ಋಷಿಗಳು ನರಕದ ವಿಶೇಷ ವರ್ಣನೆಯನ್ನು ಈ ರೀತಿಯಾಗಿ ಹೇಳುವುದರಿಂದ ಹೇಳುವುದನ್ನು ಕೇಳಿದೆನು ವ್ರತ ಶೀಲ ಚಾರಿತ್ರ್ಯ
14:50 ಗುಣಗಳಿಲ್ಲದವನು ಪ್ರಾಣಿ ವಧ್ಯೆಯನ್ನು ಮಾಡುವವರು ಬೇಟೆಯಾಡುವವರು ಒಲವು ಹಗೆತನ ಜಿಪುಣತನಗಳೇ ಕಾರಣವಾಗಿ ಸುಳ್ಳು ಹೇಳಿ ಜೀವಿಗಳಿಗೆ ದುಃಖವನ್ನು ಉಂಟುಮಾಡುವವರು ಹತ್ಯೆ ಮಾಡುವವರು, ಹಿಂಸೆ ಮಾಡುವವರು, ಕಳವು ಮಾಡುವವರು, ಪರಸ್ತ್ರೀಯರಲ್ಲಿ ಪರಸ್ತ್ರೀಯರಲ್ಲಿ ಜಾರತ್ವದಿಂದ ರಹಸ್ಯವಾಗಿ ಬಾಳುವವರು ಮಿತಿ ಇಲ್ಲದೆ ವಸ್ತು ಸಂಗ್ರಹವನ್ನು ಕೂಡಿಡುವವರು ಅದಲ್ಲದೆ ಸಾರಾಯಿ ಹೆಂಡ ಮಾಂಸಗಳನ್ನು ಆಲ ಅಶ್ವತ್ತ ಅತ್ತಿ ಇಪ್ಪೆ ಗೋಳಿ ಎಂಬ ಐದು ಬಗೆಯ ಹಾಲು ಮರಗಳ ಹಣ್ಣುಗಳನ್ನು ಅಣಬೆಯನ್ನು ಸೆಣಬಿನ ಹೂವನ್ನು ಸೇವನೆ ಮಾಡುವವರು ಇವು ಅಲ್ಲ ಅಲ್ಲದೆ ಕುಡಿಯಬಾರದದನ್ನು ಕುಡಿಯುವುದು ತಿನ್ನಬಾರದನ್ನು
15:35 ತಿನ್ನುವುದು ಬ್ರಹ್ಮ ಹತ್ಯೆ ಸುರಾಪಾನ ಸ್ತೇಯ ಗುರುಪತ್ನಿಗಮನ ಮತ್ತು ಈ ಪಾಪಗಳನ್ನು ಮಾಡಿದವರ ಒಡನಾಟ ಎಂಬ ಪಂಚ ಮಹಾಪಾತಕಗಳನ್ನು ಮಾಡಿದವರು ಇವರೆಲ್ಲರೂ ಹಿಂತಿರುಗುವ ಅವಕಾಶವೇ ಇಲ್ಲದೆ ಸತ್ತು ಏಳು ನರಕಗಳಲ್ಲಿ ಹುಟ್ಟಿ ದುಃಖವನ್ನು ಹೊಂದುವರು ನರಕದಲ್ಲಿ ಹುಟ್ಟಿ ಬಂದವರ ಉಂಗುರಗಳಲ್ಲಿ ಉಗುರುಗಳಲ್ಲಿ ಹರಿತವಾದ ಸಲಾಕಿಗಳನ್ನು ಹುಗಿಸುತ್ತಾರೆ ಶರೀರವನ್ನು ಕತ್ತರಿಸಿ ಗರಗಸದಿಂದ ಸೀಳುತ್ತಾರೆ ನಾರಕಿಗಳು ಸಂತೋಷವಿಲ್ಲದವರು ಒಡನೆಯೇ ಉಂಟಾದ ದುಃಖೋದ್ವೇಗಗಳನ್ನು ಬಹುಕಾಲ ಅನುಭವಿಸುತ್ತಾರೆ ಅದಲ್ಲದೆ ತಿವಿದು ಕೆರೆದು ಒದರಿ ಕಾಚಿನಂತೆ ಚೂರು ಚೂರು ಮಾಡಿ ಮುರಿದು
16:23 ನೀಳವಾದ ಮೂಳೆಗಳನ್ನು ತುಂಡು ತುಂಡು ಮಾಡಿ ಮರ್ಮಸ್ಥಳಗಳು ಬಾಯಿ ತೆರೆಯುವಂತೆ ಹೊಸ ಹುಣ್ಣುಗಳ ಮೇಲೆ ಹೊಯಿ ಎನ್ನುತ್ತ ನರಕದಲ್ಲಿ ಶಿಕ್ಷಿಸುತ್ತಾರೆ ಸೊಂಟವನ್ನು ಕತ್ತರಿಸು ತೊಡೆಯನ್ನು ಮುರಿ ಗಡಗಡ ನಡುಗುವಂತೆ ಮೇಲೆ ಬಿದ್ದು ತಡ ಮಾಡದೆ ಪಾಪಿಯನ್ನು ಹಿಡಿದು ಮುರಿಯುವ ಹಾಗೆ ಕಟ್ಟು ಬಿಲಿವಿಲಿ ಒದ್ದಾಡಲು ಹೆಡೆತಲೆ ಒಡೆಯುವಂತೆ ದೊಣ್ಣೆಯಲ್ಲಿ ಬಡಿ ಎನ್ನುತ್ತಾರೆ ಬಡಿ ಕೊಲ್ಲು ಕಟ್ಟು ತಿವಿ ಮುರಿ ಕಡಿ ಸೊಂಟ ಕತ್ತರಿಸು ಕುತ್ತಿ ಕರುಳನ್ನು ಹೊರತೆಗೆ ಮುಖಕ್ಕೆ ಬೆಂಕಿ ಹಾಕು ಹಿಡಿ ಹೊಡೆ ನೇರವಾಗಿ ತಿವಿ ಬಯ್ಯು ಉತ್ಸಾಹದಿಂದ ನುಂಗಿಬಿಡು ಎಂದು ನರಕದವರು ಮುತ್ತಿಕೊಳ್ಳುತ್ತಾರೆ. ಅದಲ್ಲದೆ ಒನಕೆಗಳಿಂದ ಈಟಿಗಳಿಂದ ಚುಚ್ಚುವ ಕೋಡುಗಳಿಂದ ಕರುಳಿನ ಮಾಲೆಗಳು ನೆಲದಲ್ಲಿ ಸುರಿಯುವಂತೆ
17:08 ಕುತ್ತುವುದು ಸೌದೆಗಳಿಂದ ಹೊಡೆದು ಎಳೆಯುವುದು ಗರಗಸಗಳಿಂದ ಮರವನ್ನು ಸೀಳುವಂತೆ ಕೈಯನ್ನು ಕಾಲನ್ನು ಅಗಲಿಸಿ ಹಿಡಿದು ಬಿಗಿಯಾಗಿ ಕಟ್ಟಿ ಉದ್ದಕ್ಕೆ ಹಿಡಿದು ಸೀಳುವುದು ಇಂತು ಇವೇ ಮೊದಲಾಗಿ ಉಳ್ಳ ದುಃಖಗಳನ್ನು ಕಣ್ಣು ರೆಪ್ಪೆ ಮುಚ್ಚಿ ತೆರೆಯುವಷ್ಟು ಹೊತ್ತು ಹೊತ್ತು ಕೂಡ ದುಃಖವಿಲ್ಲದ ಉಸಿರು ಬಿಡಲು ಅವಕಾಶವಿಲ್ಲದಿರುವ ಅತ್ಯಂತ ಕಠಿಣಕರವಾದ ಏಳನೆಯ ನರಕದಲ್ಲಿ 33 ಸಾಗರ ಸಮಾನವಾದ ಕಾಲದವರೆಗೆ ನಾರಕಿಗಳು ದುಃಖವನ್ನು ಅನುಭವಿಸುವರು ಮತ್ತೇನೆಂದರೆ ದಾನ ಪೂಜೆ ಶೀಲ ಉಪವಾಸ ಈ ರೀತಿ ನಾಲ್ಕು ವಿಧವಾಗಿರುವ ಶ್ರಾವಕ ಧರ್ಮದಲ್ಲಿ ವರ್ತಿಸುವವರು ತಪವನ್ನು ಆಚರಿಸುವವರು ಸ್ವರ್ಗ ಮೋಕ್ಷಗಳ ಸುಖಕ್ಕೆ ಭಾಗಿಗಳಾಗುವರು ಎಂದು ಈ ರೀತಿಯಾಗಿ ಶಿವಗುಪ್ತಾಚಾರ್ಯರು
17:53 ಹೇಳುತ್ತಿದ್ದರು ಅದನ್ನು ನಾನು ಕೇಳಿ ಋಷಿಗಳ ಬಳಿಯಲ್ಲಿ ಅನುವ್ರತ ಅಂದರೆ ಅಹಿಂಸೆ ಸತ್ಯ ಅಚೌರ್ಯ ಬ್ರಹ್ಮಚರ್ಯ ಅಪರಿಗ್ರಹ ಗುಣವೃತ ಅಂದ್ರೆ ದಿಗ್ವತ ದೇಶವ್ರತ ಅನರ್ಥ ದಂಡವೃತ ಶಿಕ್ಷಾವ್ರತ ಅಂದ್ರೆ ಸಾಮಾಯಿಕ ವ್ರತ ಪ್ರೋಷದೋ ಉಪವಾಸವ್ರತ ಭೋಗ ಪರಿಭೋಗ ಪರಮಾಣುವ್ರತ ಅತಿಥಿ ಸಂವಿಭಾಗ ವ್ರತ ಹೀಗೆೆ ಬಗೆಯ ಶ್ರಾವಕ ಧರ್ಮವನ್ನು ಜಿನೇಶ್ವರನೇ ದೇವರು ಕೊಲ್ಲದಿರುವುದೇ ಧರ್ಮಹತ್ತು ಬಗೆಯ ಬಾಹ್ಯ ಪರಿಗ್ರಹವು ಹತ್ತು ಬಗೆಯ ಅಂತರಂಗ ಪರಿಗ್ರಹವು ಇಲ್ಲದಿರುವುದೇ ತಪಸ್ಸು ಜೈನ ಧರ್ಮ ಶಾಸ್ತ್ರದಲ್ಲಿ ಹೇಳಿರುವ ಜೀವ ಅಜೀವ ಪುಣ್ಯ ಪಾಪ
18:39 ಅಸ್ರವ ಸಂವರ ನಿರ್ಜರ ಬಂಧ ಮೋಕ್ಷ ಎಂಬ ಈ ಒಂಬತ್ತು ಪದಾರ್ಥಗಳನ್ನು ಪಂಚಾಸ್ತಿ ಕಾಯಗಳನ್ನು ಆರು ಬಗೆಯ ದ್ರವ್ಯಗಳನ್ನು ನಂಬುವುದು ಸಂಯುಕ್ತ್ವ ಎನಿಸುವುದು ಈ ಸಮಯಕ್ತ್ವದ ಉಲ್ಲಂಘನೆಯ ವರ್ತನೆಗಳು ಶಂಕೆ ಮೊದಲಾದ ಎಂಟು ಮಲಗಳುಎಂಟುಮ ಮದಗಳು ಮೂರು ಮೂಡಗಳು ಆರು ಅನಾಯತನ ಸೇವೆಗಳು ಎಂಬ ಈ 25ಆಗಿವೆ ಅವನ್ನೆಲ್ಲ ಹಿಂಗಿಸಿ ನಿಶಂಕೆ ಮೊದಲಾದ ಎಂಟು ಗುಣಗಳಿಂದ ಕೂಡಿದ ಶುದ್ಧವಾದ ಸಮಯಕ್ತ್ವದೊಡನೆ ವ್ರತಗಳನ್ನು ಸ್ವೀಕರಿಸಿ ನರಕಗಳ ದುಃಖಗಳನ್ನು ಕೇಳಿ ಅವುಗಳ ಲಕ್ಷ್ಯದಲ್ಲಿ ಒಂದು ಭಾಗದಷ್ಟು ಕೂಡ ದುಃಖವು ಇಲ್ಲವೆಂದು ಮನಸ್ಸಿನಲ್ಲಿ ಭಾವಿಸಿ 32
19:27 ಶಿಕ್ಷೆಗಳನ್ನು ನಾನು ಸಹಿಸಿದೆನು ಎಂದು ವಿದ್ಯುತ್ಚೋರನು ಹೇಳಿದನು ಅದನ್ನು ಕೇಳಿ ರಾಜನು ನಿನಗೆ ನಾನು ಕ್ಷಮೆ ಕೊಡಬೇಕು ಎಂಬುದಾಗಿ ನಿನಗೆ ನಾನು ಒಲಿದಿದ್ದೇನೆ ಬೇಡಿಕೋ ನೀನು ಬೇಡಿದದೆಲ್ಲವನ್ನು ಕೊಡುತ್ತೇನೆ ಎಂದು ಹೇಳುತ್ತಾನೆ ನನಗೆ ಬೇರೆ ಯಾವುದು ಬೇಕಾಗಿಲ್ಲ ನನ್ನ ಗೆಳೆಯನಾದ ಯಮದಂಡನಿಗೆ ನೀವು ಕ್ಷಮೆಯನ್ನು ಕೊಡಬೇಕು ಎಂದು ನಾನು ಬೇಡುತ್ತೇನೆ ಎಂದು ವಿದ್ಯುತ್ಚೋರ ಹೇಳಲು ರಾಜನು ಹೀಗೆ ಹೇಳುತ್ತಾನೆ ಯಮದಂಡನು ನಿನಗೆ ಹೇಗೆ ಗೆಳೆಯನಾದ ಅಲ್ಲದೆ ನೀನು ಶ್ರಾವಕವೃತ ಳನ್ನು ಸ್ವೀಕರಿಸುವೆ ಆದರೆ ಏಕೆ ಕಳವು ಮಾಡುತ್ತಿ ಹೀಗೆ ಕೇಳಿದಾಗ ಅವನು ಯಮದಂಡನು ನನಗೆ ಗೆಳೆಯನಾದುದನ್ನು ನಿಮ್ಮ ಪಟ್ಟಣದ ಹೊನ್ನನ್ನು ಕಳವು ಮಾಡಿದಕ್ಕೆ ಕಾರಣವನ್ನು ಹೇಳುವೆನು ಅರಸನೇ ಕೇಳು ಎಂದು ವಿದ್ಯಚೋರನು ಹೀಗೆ
20:12 ಹೇಳತೊಡಗಿದನು ಈ ಜಂಬೂದ್ವೀಪದ ಭರತ ಕ್ಷೇತ್ರದಲ್ಲಿ ದಕ್ಷಿಣ ದೇಶದಲ್ಲಿ ಬೊಟ್ಟನ್ನು ಹೋಲುವಂತಿರುವ ಅಭೇರವೆಂಬ ನಾಡು ಇದೆ ಅಲ್ಲಿ ವರ್ಣೆ ಎಂಬ ನದಿಯ ತೀರದಲ್ಲಿ ವೇಣಾತಟ ಎಂಬ ಪಟ್ಟಣವಿದೆ ಅದು ಪಟ್ಟಣದ ಗುಣ ಳಿಂದ ಅತ್ಯಂತ ರಮಣೀಯವಾದದ್ದು ಇಂದ್ರಲೋಕವನ್ನೇ ಹೋಲುವುದು ಅದನ್ನು ಜಿತಶತ್ರು ಎಂಬ ಅರಸನು ಆಳುತ್ತಿದ್ದನು ಅವನಿಗೆ ವಿಜಯಮತಿ ಎಂಬ ರಾಣಿ ಇದ್ದಳು ಅವರಿಗೆ ನಾನು ಮಗನಾಗಿರುವೆನು ವಿದ್ಯುತ್ಚೋರ ಎಂಬ ಹೆಸರುಳ್ಳವನು ಆ ಪಟ್ಟಣದಲ್ಲಿ ಯಮಪಾಶನೆಂಬ ನಗರ ರಕ್ಷಕ ಅಂದರೆ ತಳಾರ ಇದ್ದ ಅವನ ಹೆಂಡತಿ ನಿಗುಣ ದೇವತೆ ಎಂಬವಳು ಆ ಇಬ್ಬರಿಗೂ ಯಮದಂಡ ಎನ್ನುವಂತಹ
20:59 ಮಗ ಇದ್ದ. ನಾವಿಬ್ಬರು ಸಮಾನ ವಯಸ್ಸಿನವರಾಗಿದ್ದೇವು. ನಮಗಿಬ್ಬರಿಗೂ ಐದು ಆರು ವರ್ಷ ಪ್ರಾಯವಾದಾಗ ಜೈನ ಸದ್ಗೃಹಸ್ಥನಾದ ಸಿದ್ಧಾರ್ಥನೆಂಬ ಉಪಾಧ್ಯಾಯನ ಬಳಿಯಲ್ಲಿ ಇಬ್ಬರನ್ನು ವಿದ್ಯಾಭ್ಯಾಸಕ್ಕೆ ಇಟ್ಟರು. ಏಳೆಂಟು ವರ್ಷದ ಒಳಗಾಗಿ ನಾವಿಬ್ಬರು ವ್ಯಾಕರಣ ಪ್ರಮಾಣ ಛಂದಸ್ಸು ಅಲಂಕಾರ ನೆಘಂಟು ಕಾವ್ಯ ನಾಟಕ ಸಾಮುದ್ರಿಕ ವಾತ್ಸಾಯನ ಶಾಲಿಹೋತ್ರ ಪಾಲಕಾಪ್ಯ ಚಾಣಕ್ಯ ವೈದ್ಯ ಮೊದಲಾಗಿ ಉಳ್ಳ ಶಾಸ್ತ್ರಗಳನ್ನು ಕಲಿತೆವು ಆಮೇಲೆ ಇವನು ತಳಾರನ ಮಗನಾದುದ್ದರಿಂದ ತನಗೆ ಯೋಗ್ಯವಾದ ಕಳ್ಳರನ್ನು ಕಂಡುಹಿಡಿಯುವ ಕ್ರಮವನ್ನು ಹೇಳತಕ್ಕ ಸುರಖ ಎನ್ನುವಂತ ವಿದ್ಯೆಯನ್ನು ಕಲಿತನು ನಾನು ಕಳವುಮಾಡು ಉಪಾಯವನ್ನು ತಿಳಿಸುವ ಕರಪಟ
21:46 ಶಾಸ್ತ್ರವನ್ನು ಕಲಿತೆನೆ ಹೀಗೆ ನಮ್ಮೊಳಗೆ ಪರಸ್ಪರ ಪ್ರೀತಿಯಿಂದ ಕಾಲ ಕಳೆಯುತ್ತಿತ್ತು ಒಂದು ದಿವಸ ನಾವಿಬ್ಬರು ಕಾಡಿನಲ್ಲಿ ಆಟವಾಡಲೆಂದು ಇಂದ್ರೋಪಮ ಎಂಬ ಕಾಡಿಗೆ ಹೋದೆವು ಅಲ್ಲಿ ಅಶೋಕ ಪುನ್ನಾಗ ರಂಜೆ ತಿಲಕ ಹೊಂಗೆ ಸಂಪಗೆ ಅಡಕೆ ಮರ ತೆಂಗಿನ ಮರ ಖರ್ಜೂರ ಜಂಬು ನಿಂಬೆ ಹಲಸು ದಾಳಿಂಬೆ ಬಾಳೆ ದ್ರಾಕ್ಷಿ ಮಾವು ಹೀಗೆ ಹಲವು ಬಗೆಯ ಮರಗಳ ಜಾತಿಗಳಿಂದ ಒತ್ತೊತ್ತಾಗಿರುವ ನಂದನವನದ ಉದ್ಯಾನದಲ್ಲಿ ಇಬ್ಬರು ಉಳಿಚಂಡಾಟವನ್ನು ಆಡುತ್ತಿದ್ದೇವು ಈತನು ಅದೃಶ್ಯವಾಗತಕ್ಕ ವಿದ್ಯೆಯನ್ನು ಕಲಿತವನಾದುದ್ದರಿಂದ ಎಲ್ಲಿದ್ದರೂ ಕಾಣದ ರೀತಿಯಲ್ಲಿ ಇರಲು ಈತನನ್ನು ಬಹಳವಾಗಿ ನಾನು ಹುಡುಕುತ್ತಿದ್ದೆ ಆದರೂ ಕಾಣದೆ
22:33 ದಿಕ್ಕು ಕಾಣದೆ ಬೇಸರಗೊಂಡು ಹೀಗೆ ಹೇಳಿದೆ ಮಗನೇ ನೀನು ಪಟ್ಟಣದ ಕಾವಲುಗಾರನಾದಾಗ ನಗರ ನಿನ್ನ ರಕ್ಷಣೆಯಲ್ಲಿ ಇದ್ದಾಗಲೇ ನಾನು ಕದ್ದು ನಿನ್ನನ್ನು ನನ್ನು ಕೊಲ್ಲಿಸದಿದ್ದರೆ ಪಂಥವೇನು ಎಂದು ನಾನು ಹೇಳಿದಾಗ ಈತನು ಮಗನೇ ನಾನು ತಳಾರ ಕೆಲಸ ಮಾಡುವಾಗ ನೀನು ಕದ್ದರೆ ನಿನ್ನನ್ನು ಹಿಡಿದು ಮುರಿಯುವ ಹಾಗೆ ಕಟ್ಟಿ ಕಳ್ಳರಿಗೆ ವಿಧಿಸತಕ್ಕ ಶಿಕ್ಷೆಯಿಂದ ದಂಡಿಸದಿದ್ದರೆ ಏನಾಯಿತು ಎಂದು ಹೇಳಿದನು ಈ ಶಪದದ ಮಾತನ್ನು ಮರೆಯಬೇಡ ಎಂದು ನಾವು ಒಬ್ಬೊಬ್ಬರನ್ನು ಮೂದಲಿಸಿ ಪ್ರತಿಜ್ಞೆ ಮಾಡಿದೆವು ಕೆಲವು ಕಾಲದ ನಂತರ ನನ್ನ ತಂದೆ ನನಗೆ ರಾಜ್ಯಾಕಾರವನ್ನು ಕೊಟ್ಟುಶ ಶರುತ ಸಾಗರರೆಂಬ ಋಷಿಗಳ ಬಳಿಯಲ್ಲಿ ತಪಸ್ಸನ್ನು ಕೈಗೊಂಡನು. ಈ ಯಮದಂಡನ ತಂದೆಯು ತನ್ನ ವಂಶಕ್ರಮದಿಂದ ಬಂದ
23:19 ತಳವಾರಿಕೆಯನ್ನು ಇವನಿಗೆ ಕೊಟ್ಟು ರಾಜನೊಡನೆ ತಪಸ್ಸನ್ನು ಸ್ವೀಕರಿಸಿದನು ಆಮೇಲೆ ನಾನು ಅರಸನಾಗಿ ರಾಜ್ಯವಾಳುತ್ತಿದ್ದಾಗ ಈತನು ಆ ಪಟ್ಟಣದಲ್ಲಿ ತಳವಾರ ಕೆಲಸವನ್ನು ಮಾಡುತ್ತಿದ್ದನು ಹೀಗೆ ಇಬ್ಬರಿಗೂ ಸುಖದಲ್ಲಿ ಕಾಲ ಕಳೆಯುತ್ತಿತ್ತು ಅನಂತರ ಒಂದು ದಿವಸ ಈತನು ತನ್ನ ಮನಸ್ಸಿನಲ್ಲಿ ಈ ರೀತಿಯಾಗಿ ಯೋಚಿಸಿದನು ನನ್ನ ರಾಜನು ಕಳ್ಳನಾಗಿರುವನು ನಾನು ಈ ಪಟ್ಟಣದಲ್ಲಿ ಕಾವಲುಗಾರಿಕೆಾ ಮಾಡುತ್ತಿದ್ದೇನೆ ಈ ಕೆಲಸ ಒಳ್ಳೆಯದಲ್ಲ ಎಂದು ನನಗೆ ಹೆದರಿ ನಾಡನ್ನು ತ್ಯಜಿಸಿ ಬಂದು ನಿಮ್ಮ ಸೇವಕನಾದನು ನಾನು ಇವನನ್ನು ನಾನಾಳುವ ನಾಡಿನ ಎಂಟು ದಿಕ್ಕುಗಳಲ್ಲಿರುವ ಗ್ರಾಮ ನಗರ ಖೇಡ ಕರವಡ ಮಡಂಬ ಪಟ್ಟಣ ದ್ರೋಣಮುಖ ಎಂಬ ಭೂಭಾಗಗಳಲ್ಲಿ ವಿಚಾರಿಸಿಯು ಕಾಣಲು ಸಿಗಲಿಲ್ಲ ಅನ್ಯರ
24:06 ರಾಜ್ಯಗಳಲ್ಲಿ ವಿಚಾರಿಸಿದರೂ ಕಾಣಸಿಗಲಿಲ್ಲ ಆದ್ದರಿಂದ ಇಲ್ಲಿ ಹುಡುಕಿಸುವುದಕ್ಕಾಗಿ ಇಲ್ಲಿಗೆ ಚಾರಕರನ್ನು ಕಳುಹಿಸಿದೆನು ಅವರು ಹುಡುಕಿ ಕಂಡುಬಂದು ನನಗೆ ಹೀಗೆ ಹೇಳಿದರು ದೇವ ಮಿಥಳೆ ಎಂಬ ಪಟ್ಟಣವಿದೆ ಅದನ್ನು ವಾಮರಥನೆಂಬ ರಾಜನು ಆಳುತ್ತಿದ್ದಾನೆ ಯಮದಂಡನು ಅಲ್ಲಿಗೆ ಹೋಗಿ ಅವನ ಸೇವಕನಾಗಿ ಪಟ್ಟಣದ ರಕ್ಷಣೆಯ ಕೆಲಸವನ್ನು ಪಡೆದು ತಳವಾರನಾಗಿ ಸುಖದಿಂದ ಇದ್ದಾನೆ ಎಂದು ಚಾರಕರು ಹೇಳಲು ಆ ಮಾತನ್ನು ನಾನು ಕೇಳಿ ಮಿಥಳೆ ಎಂಬ ಪಟ್ಟಣಕ್ಕೆ ನಾನು ಯಾರೊಬ್ಬರು ತಿಳಿಯದ ಹಾಗೆ ಹೋಗಿ ಯಮದಂಡನನ್ನು ಕೂಡಿಕೊಂಡು ಬರುತ್ತೇನೆ ಎಂದು ಪುರುಷೋತ್ತಮನೆಂಬ ಮಂತ್ರಿಗೆ ಹೇಳಿದನು. ಆಮೇಲೆ ವಜ್ರಸೇನನೆಂಬ ಹೆಗ್ಗಡೆಯನ್ನು ಕರೆಯಿಸಿ ನಾನು ಒಂದು ಗೃಹಕೃತ್ಯದ ಸಂಬಂಧದಲ್ಲಿ ಹೋಗಿ
24:53 ಬರುತ್ತೇನೆ. ನಾನು ಬರುವವರೆಗೆ ರಾಜ್ಯಪಾಲನೆ ಮಾಡುತ್ತಿರು ಎಂದು ಹೇಳಿ ಎಲ್ಲಾ ರಾಜ್ಯಭಾರವನ್ನು ಅವನಿಗೆ ಒಪ್ಪಿಸಿಕೊಟ್ಟು ನಡುವಿರುಳಿನಲ್ಲಿ ಬಟ್ಟೆಯನ್ನು ಹರಿದು ಹರಿದು ಹುಟ್ಟುಕೊಂಡು ಆಮೇಲೆ ಯಾರೊಬ್ಬರು ತಿಳಿಯದ ರೀತಿಯಲ್ಲಿ ಒಬ್ಬನೇ ಹೊರಟು ಬಂದು ಈ ಪಟ್ಟಣವನ್ನು ಪ್ರವೇಶಿಸುತ್ತೇನೆ ಇಲ್ಲಿ ನನ್ನ ಪ್ರತಿಜ್ಞೆಯೇ ಕಾರಣವಾಗಿ ದ್ರವ್ಯವನ್ನು ಕಳವು ಮಾಡಿ ಈ ಯಮದಂಡನನ್ನು ಕೊಲ್ಲಿಸುವ ಹಾಗೆ ಮಾಡಿದ್ದೇನೆ ಇದೇ ನಾನು ಕಳವು ಮಾಡಲು ಕಾರಣ ಈತನು ನನಗೆ ಈ ರೀತಿಯಲ್ಲಿ ಮಿತ್ರನಾಗಿದ್ದಾನೆ ವಿದ್ದಿಚೋರನು ಹೀಗೆ ಹೇಳಿ ಮತ್ತೆ ಹೀಗೆಂದನು ದೇವಶಕ್ತಿಯುಳ್ಳ ನಿಮ್ಮ ಸರ್ವರುಜಾಪಹಾರ ಎಂಬ ಮಾಲೆ ಸಮ್ಯಕ್ ದೃಷ್ಟಿಯುಳ್ಳವನಾದ ಕಾರಣದಿಂದ
25:39 ನನ್ನ ಕೈಗೆ ಬಂದಿದೆ ಇನ್ನುಳಿದ ಮಿಥ್ಯಾದೃಷ್ಟಿಯುಳ್ಳವರ ಕೈಗೆ ಇದು ಬರಲಿಕ್ಕಿಲ್ಲ ಎಂದಾಗ ರಾಜನು ತನ್ನ ಕೈಗೆ ಹಾರಬಂದ ಸಂಗತಿಯನ್ನು ತನ್ನ ಸಭೆಯ ಜನಸಮೂಹಕ್ಕೆಲ್ಲ ಹೀಗೆ ಹೇಳ ತೊಡಗಿದನು ವಾಮರಥ ರಾಜನು ತನ್ನ ಕಥೆಯನ್ನು ಧನ್ವಂತರಿ ವಿಶ್ವಾನುಲೋಮ ಎಂಬ ಪೂರ್ವಿಕರಿಂದಲೇ ಪ್ರಾರಂಭಿಸಿ ಹೇಳುತ್ತ ಮತ್ತೆ ಹೀಗೆಂದನು ನಮ್ಮ ವಂಶದ ಪದ್ಮರಥನೆಂಬ ರಾಜನು ಒಂದು ದಿವಸ ವಾಸುಪೂಜ್ಯ ತೀರ್ಥಂಕರ ದೇವರನ್ನು ವಂದಿಸುವುದಕ್ಕಾಗಿ ಹೋಗುತ್ತಿದ್ದನು ನಡುವಿನಲ್ಲಿ ಅವನನ್ನು ಅಚ್ುತೇಂದ್ರನು ವಿಶ್ವವನ್ನು ಸಹಜ ರೀತಿಯಲ್ಲಿ ಸಂಚರಿಸತಕ್ಕ ವಾಹನದೇವನು ಹೀಗೆ ಇಬ್ಬರು ಕಂಡು ಅಚ್ಯುತೇಂದ್ರನು ವಾಹನದೇವನೊಡನೆ
26:25 ಈತನು ಅಧರ್ಮಿಯಿಂದ ಧರ್ಮವನ್ನು ಸ್ವೀಕರಿಸಿ ವಾಸುಪೂಜ್ಯ ತೀರ್ಥಂಕರ ಪರಮದೇವರನ್ನು ವಂದಿಸಿದಲ್ಲದೆ ಊಟ ಮಾಡುವುದಿಲ್ಲ ಎಂದು ಹಠ ತೊಟ್ಟುಕೊಂಡು ಚಂಪಾನಗರಕ್ಕೆ ಹೋಗುತ್ತಿದ್ದಾನೆ ಇವನನ್ನು ಹೋಗಲಿಕ್ಕೆ ಬಿಡದೆ ಹಿಂತಿರುಗಿಸಲು ನೀನು ಸಮರ್ಥನಾದರೆ ಹಿಂತಿರುಗಿಸು ಎಂದು ಹೇಳಿದನು ವಾಹನದೇವನು ತನ್ನಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಎಲ್ಲಾ ಬಗೆಯಲ್ಲಿ ಎಷ್ಟೆಷ್ಟೋ ವಿಧದಲ್ಲಿ ಉಪಸರ್ಗವನ್ನು ಉಂಟುಮಾಡಿ ಹಿಂತಿರುಗಿಸಲಾರದೆ ಬೇಸರಗೊಂಡವನಾಗಿ ಬಿಟ್ಟುಬಿಟ್ಟನು ಅಚ್ುತೇಂದ್ರನು ಪದ್ಮರಥನಿಗೆ ಮೆಚ್ಚಿ ತಾನು ಧರಿಸಿದ್ದ ಸರ್ವರುಜಾಪಹಾರ ಎಂಬ ಹಾರವನ್ನು ಅವನ ಕೊರಳಿಗೆ ತಾನೇ ಕಟ್ಟಿ ಹೊಗಳಿ ಪೂಜಿಸಿ ತೆರಳಿದನು ಈ ರೀತಿಯಲ್ಲಿ ಈ ಮಾಲೆ
27:13 ನನಗೆ ವಂಶಾನುಗತವಾಗಿ ಬಂದಿದೆ ಎಂದು ವಾಮರಥನು ಹೇಳಿದನು ಆಮೇಲೆ ಒಂಟೆಯನ್ನು ಏರಿಕೊಂಡು ಬರುವ ದೂತರಿಬ್ಬರು ರು ಪತ್ರವನ್ನು ತೆಗೆದುಕೊಂಡು ಬಂದು ಅರಸನ ಮನೆಯ ಬಾಗಿಲಲ್ಲಿ ನಿಂದು ತಮಗೆ ರಾಜನನ್ನು ಕಾಣಬೇಕಾಗಿದೆ ಎಂದು ದ್ವಾರಪಾಲಕನಿಗೆ ತಿಳಿಸಿದನು ದ್ವಾರಪಾಲನು ಇದನ್ನು ರಾಜನಿಗೆ ಹೇಳಲು ರಾಜನು ಅನುಮತಿಯನ್ನು ಇತ್ತನು ಅದರಂತೆ ದೂತರು ಅರಮನೆಯನ್ನು ಹೊಕ್ಕು ಆಸ್ಥಾನ ಮಂಟಪದಲ್ಲಿದ್ದ ವಿದ್ಯುತ್ಚೋರನನ್ನು ಕಂಡು ಸಾಷ್ಟಾಂಗ ವಂದನೆ ಮಾಡಿ ಆತನ ಮುಂದೆ ಪತ್ರವನ್ನು ಇಟ್ಟರು ಆಗ ರಾಜನ ಅಕಾರಿ ಅಂದ್ರೆ ಮಂತ್ರಿ ಮಂತ್ರಿಯೊಬ್ಬನು ಪತ್ರವನ್ನು ತೆಗೆದುಕೊಂಡು ರಾಜನ ಮುಂದೆ ಈ ರೀತಿಯಾಗಿ ಓದಿದನು ವಿದ್ಯಚ್ಚೋರ ಮಹಾರಾಜರಿಗೆ ಮಂತ್ರಿಯಾದ ಪುರುಷೋತ್ತಮನು
28:02 ಹೆಗ್ಗಡೆಯಾದ ವಜ್ರಸೇನನು ಸಾಷ್ಟಾಂಗ ವಂದನೆ ಮಾಡಿ ಕಾರ್ಯವನ್ನು ವಿಜ್ಞಾಪಿಸುವರು ತಾವು ಹೋಗಿ ಹಲವು ದಿವಸವಾಯಿತು ಹಿಂದಿನ ಗೃಹಕೃತ್ಯವನ್ನು ಮರೆತಿದ್ದೀರಿ ತಾವು ಇಲ್ಲದೆ ರಾಜ್ಯ ಪರಿಪಾಲನೆ ಮಾಡುವವರು ಯಾರು ಇಲ್ಲ ಈ ಪತ್ರವನ್ನು ಕಂಡ ಕೂಡಲೇ ತಡವಿಲ್ಲದೆ ಹೊರಟುಬೇ ಬೇಗನೆ ಬರಬೇಕು ಹೀಗೆ ಓದಿದದನ್ನು ವಾಮರಥನು ಕೇಳಿ ಮೊದಲು ಈತನು ಹೇಳಿದದ್ದು ಪತ್ರದ ಮಾತು ಒಂದೇ ಆಯಿತು ಎಂದು ಸಂಶಯವಿಲ್ಲದೆ ಆಗ ವಿಶ್ವಾಸ ಪಡುತ್ತಾನೆ ಈತನು ತನ್ನ ಸಾಮಂತ ರಾಜನು ಎಂದು ತಿಳಿದು ಸಿಂಹಾಸನದಂತೆ ಇರತಕ್ಕ ಪೀಠವನ್ನು ಇಡಲು ಹೇಳಿ ಇರಿಸಿ ಹೀಗೆಂದನು ನೀನು ನನ್ನ ತಂಗಿಯ ಮಗನಯ್ಯ ಸೋದರನಳಿಯನಯ್ಯ ನಿನಗೆ ನನ್ನ ಹೆಣ್ಣು ಮಕ್ಕಳನ್ನು ಕೊಡುತ್ತೇನೆ
28:50 ಕನ್ಯೆಯರು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಗಳಿಂದ ಕೂಡಿದವರು ಶ್ರೀಮತಿ ವಸುಮತಿ ಗುಣಮತಿ ಸುಲೋಚನೆ ಸುಪ್ರಭೆ ಸುಕಾಂತೆ ಸುಶೀಲೆ ಮನೋಹರಿ ಎಂಬ ಹೆಸರುಳ್ಳ ಎಂಟು ಮಂದಿ ಕನ್ಯೆಯರು ಇವರು ಹೊಸ ಜವನೆಯರು ಬರಹ ಚಿತ್ರವಿದ್ಯೆ ಗಣಿತ ಗಾನ ನೃತ್ಯ ಚಿತ್ರಕಲೆ ಭೋರ್ಜಾದಿ ಪತ್ರಗಳನ್ನು ಒಂದೇ ರೀತಿ ಕತ್ತರಿಸುವುದು ಇವೇ ಮೊದಲಾಗಿ ಉಳ್ಳ 64 ಕಲೆಗಳಲ್ಲಿ ಅತ್ಯಂತ ಪ್ರವೀಣೆಯರಾಗಿದ್ದಾರೆ ಬೇರೆ ರಾಜರುಗಳಲ್ಲಿ ಹಲವರು ಹುಡುಗರೆ ಕಾಣಿಕೆಗಳನ್ನು ಪತ್ರಗಳನ್ನು ಅಕಾರಿಗಳನ್ನು ಕಳುಹಿಸಿ ಕನ್ಯೆಯರನ್ನು ಕೇಳುತ್ತಿದ್ದಾರೆ ಕನ್ಯೆಯರನ್ನು ಕೊಡದೆ
29:35 ಇದುವರೆಗೂ ಇವರನ್ನು ಸಲಹಿಕೊಂಡಿದ್ದೇನೆ ಈ ಕನ್ಯಾರತ್ನಗಳಿಗೆ ನೀನೇ ಯೋಗ್ಯನಯ್ಯ ಈ ಎಂಟು ಮಂದಿಯನ್ನು ನಿನಗೆ ಕೊಡುತ್ತೇನೆ ಮದುವೆಯಾಗು ಎಂದು ಹೇಳಿದನು ಆಗ ವಿದ್ಯುತ್ಚೋರ ಹೀಗೆ ಹೇಳುತ್ತಾನೆ ನಾನು ಒಬ್ಬಳ ಮೇಲೆ ಪ್ರೀತಿ ಪಟ್ಟಿದ್ದೇನೆ ಇವರನ್ನು ಸ್ವೀಕರಿಸಿ ಏನು ಮಾಡುವೆನು ಹೀಗೆಂದಾಗ ರಾಜನು ಯಾರಿಗಾಗಿ ನೀನು ಪ್ರೀತಿ ಪಟ್ಟಿದ್ದಿ ಎಂದು ಕೇಳಲು ಮುಕ್ತಿಶ್ರೀ ಎಂಬ ಹೆಂಡತಿಯ ಮೇಲೆ ಪ್ರೀತಿ ಪಟ್ಟಿದ್ದೇನೆ ಅವಳನ್ನು ಮದುವೆಯಾಗಬೇಕು ಎಂದು ನಿಶ್ಚಯವಾಗಿ ನುಡಿದನು ಅನಂತರ ನನ್ನ ಗೆಳೆಯನನ್ನು ನನಗೆ ಒಪ್ಪಿಸಬೇಕು ಎಂದು ಹೇಳಲು ರಾಜನು ಒಪ್ಪಿಸಿದ್ದೇನೆ ಎಂದನು ಅದರಂತೆ ರಾಜನನ್ನು ಬಿಟ್ಟು ಹೊರಟು ಯಮದಂಡನು ಸಮೇತ ವಾಗಿ ಇಬ್ಬರು ಒಂಟೆಯ ಮೇಲೆ ಕುಳಿತರು ತ್ವರೆಯಾಗಿ ಹೋಗುತ್ತಾ
30:23 ಕೆಲವು ದಿನಗಳಲ್ಲಿ ವೇಣಾತಟಕ್ಕೆ ಬಂದು ಆ ಪಟ್ಟಣದ ಹೊರಗಿದ್ದು ಹೇಳಿ ಕಳುಹಿಸಿ ಕಲಶ ಕನ್ನಡಿ ಬಾವುಟ ತೋರಣ ಧೂಪ ದೀಪ ಬೇರಿ ಬೇಸಣಿಗೆ ಎಂಬಿ ಎಂಟು ಬಗೆಯ ಅಲಂಕಾರಗಳನ್ನು ಮಾಡಿಸಿದನು ಮಂತ್ರಿ ಮೇಲಕಾರಿ ಪರಿವಾರ ಸಾಮಂತ ಮಹಾಸಾಮಂತರು ರಾಣಿವಾಸದ ಸ್ತ್ರೀಯರು ಪಟ್ಟಣಿಗರೆಲ್ಲರೂ ಎದುರಿಗೆ ಬಂದು ವಂದಿಸಿ ಮಂತ್ರಾಕ್ಷ ಕ್ಷತೆ ಹಾಕಿದ ನಂತರ ವಿದ್ಯುತ್ಚೋರ ಯಮದಂಡ ಇಬ್ಬರು ಪಟ್ಟದಾನೆಯನ್ನು ಏರಿದರು ಮುಂದುಗಡೆಯಲ್ಲಿ ಶ್ವೇತ ಛತ್ರ ಮುಂತಾದ ಅರಸುತನದ ಚಿಹೆಗಳು ಹೋಗುತ್ತಿದ್ದವು ಪಂಚಮಹಾ ಶಬ್ದಗಳು ಮಂಗಳವಾದ್ಯಗಳು ಶಬ್ದ ಮಾಡುತ್ತಿರಲು ಅವರು ಅರಮನೆಯನ್ನು ಪ್ರವೇಶಿಸಿದರು ಮಾರನೆಯ ದಿನ
31:09 ವಿದ್ಯುತ್ಚೋರನು ಆಸ್ಥಾನ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು ಸಾಮಂತರನು ಮಹಾಸಾಮಂತರನು ಮಂತ್ರಿ ಅಕಾರಿ ಪುರೋಹಿತ ಪರಿವಾರದವರನ್ನು ಅರಸಿಯರನ್ನು ಕರೆಕಳುಹಿಸಿ ಬರಮಾಡಿ ಹೀಗೆ ಹೇಳಿದನು ನಾನು ಈ ಸಂಸಾರದಲ್ಲಿ ಉಂಟಾಗುವ ಸುಖಗಳಿಗೆಲ್ಲ ಅಸಹ್ಯ ಪಟ್ಟು ವೈರಾಗ್ಯವನ್ನು ತಾಳಿ ತಪಸ್ಸನ್ನು ಸ್ವೀಕರಿಸಬೇಕೆಂದು ಭಾವಿಸಿದ್ದೇನೆ ಹೀಗೆನ್ನಲು ಅವರೆಲ್ಲರೂ ಒಟ್ಟುಸೇರಿ ಹೀಗೆಂದರು ತಪಸ್ಸು ಮಾಡುವುದಕ್ಕೆ ಇನ್ನು ಕಾಲ ಯಾವುದು ನೀನಿನ್ನು ಚಿಕ್ಕವನು ಈಗ ತಾನೇ ಯುವಕನಾ ಯುವಕನಾಗಿದ್ದಿ ಅಷ್ಟೇ ಕೆಲವು ಕಾಲದವರೆಗೆ ಅರಸುತನವನ್ನು ಮಾಡಿ ಆಮೇಲೆ ತಪಸ್ಸನ್ನು ಸ್ವೀಕರಿಸಬಹುದು ಆಗ ರಾಜ ಹೀಗೆ ಹೇಳಿದ ಆ ವೇಳೆಗೆ ಸಾಯುವರು ಬದುಕಿರುವರು ತಿಳಿಯಲು ಹೇಗೆ ಸಾಧ್ಯ ಎಂದು ಈ ರೀತಿ
31:57 ತಾತ್ಕಾಲಿಕವಾಗಿ ಅವರಿಗೆ ತಿಳಿಸಿ ಆಮೇಲೆ ಹೇಳತೊಡಗಿದನು ಸಂಸಾರದಲ್ಲಿ ಇರತಕ್ಕವರ ಆಯುಷ್ಯವು ನೊರೆಯ ಉಂಡೆಗೆ ಸಮಾನವಾಗಿರುತ್ತದೆ ರೂಪವು ಯವ್ವನವು ಇಂದ್ರಧನುಸ್ಸಿನ ಕೋಲಿಗೆ ಸಮಾನವಾಗಿರುತ್ತದೆ ರೂಪ ಯವ್ವನ ಆಯಸ್ಸು ಇಂದ್ರಿಯ ಇಂದ್ರಗೋಚರವಾದ ವಸ್ತುಗಳು ಬಗೆ ಬಗೆಯ ಸುಖಗಳು ಶರೀರ ಶಕ್ತಿ ಇಷ್ಟು ಜನರ ಸಹವಾಸ ಭೂಮಿ ಸೊಬಗು ಸಂಪತ್ತುಗಳು ನಮಗೆ ಶಾಶ್ವತವಲ್ಲ ಹೀಗೆಂದು ಉಳಿದ ಎಲ್ಲಾ ಬುದ್ಧಿಶಾಲಿಗಳು ತಮ್ಮಲ್ಲಿ ಉದಿಸಿದ ಜ್ಞಾನದ ಕಣ್ಣುಗಳಿಂದ ಇವು ಅಶಾಶ್ವತ ಎಂಬುದನ್ನು ಸರಿಯಾಗಿ ಯೋಚಿಸಲಿ ಹುಟ್ಟು ಮುಪ್ಪು ಸಾವುಗಳು ಉಂಟಾಗುವುದಿಲ್ಲವಾದರೆ ಪ್ರೀತಿಯ ಜನರ ಅಗಲಿಕೆಯ ದುಃಖ ಉಂಟಾಗುವುದಿಲ್ಲವಾದರೆ
32:43 ಎಲ್ಲ ವಸ್ತುಗಳನ್ನು ಅಶಾಶ್ವತವಾಗಿ ಆಗುವುದಿಲ್ಲ ಎನ್ನುವುದಾದರೆ ಈ ಲೋಕದಲ್ಲಿ ಜನ್ಮವೆತ್ತಲು ಯಾರಿಗೆ ತಾನೇ ಒಲವಾಗದು ಆದ್ದರಿಂದ ಮನುಷ್ಯರ ರೂಪ ಯವ್ವನ ತೇಜಸ್ಸು ಲಾವಣ್ಯ ಸೌಭಾಗ್ಯ ಆಯುಷ್ಯ ಸಿರಿ ಸಂಪತ್ತು ವೈಭವ ಪ್ರೀತಿ ಇವೇ ಮೊದಲಾಗಿ ಉಳ್ಳವು ಶಾಶ್ವತವಲ್ಲ ಅದಲ್ಲದೆ ಶರೀರ ಒಳ್ಳೆಯದೆ ಎಂದು ಕೇಳಬಹುದು ಅದು ಕೂಡ ಈ ರೀತಿಯದೇ ಆಗಿದೆ ಈ ಶರೀರವು ಅಶುಚಿಯಾದದು ಯಾವಾಗಲೂ ರಾಗ ದ್ವೇಷಗಳಿಗೆ ಪಾತ್ರವಾದದು ಅಶುಭವಾದದ್ದು ಒಳಗೂ ಹೊರಗೂ ಚರ್ಮದಿಂದ ಮುಚ್ಚಲ್ಪಟ್ಟದ್ದು ಅಥವಾ ಕರುಳು ಮಾಂಸ ನರಗಳಿಂದ ಆವರಿಸಿರುವಂತದ್ದು ಅಶುಚಿಯಾಗಿರುವ ಶುಕ್ಲ ಶೋಣಿತಗಳಿಂದ ತುಂಬಿವೆ ಮೂತ್ರ ಮಲಾದಿಗಳ ಮನೆಯಾಗಿವೆ ಶರೀರವೆಂಬ ಮನೆಯು
33:30 ಕೊಬ್ಬು ಮಜ್ಜೆ ಮಾಂಸ ರಕ್ತ ಪುಪ್ಪುಸ ಯಕೃತ್ತು ಕಫ ಸಿಂಬಳ ರಕ್ತನಾಳ ಮೂಳೆ ಇವುಗಳಿಂದ ತುಂಬಿವೆ ಚರ್ಮದಿಂದ ಹುದಿಸಲ್ಪಟ್ಟಿವೆ ಯಾವಾಗಲೂ ಅಶುಚಿಯಾಗಿವೆ ಈ ದೇಹವೆಂಬ ಮನೆ ಎಲುಬುಗಳಿಂದೆ ಆವರಿಸಿವೆ ರಕ್ತನಾಳಗಳಿಂದ ಕಟ್ಟಲ್ಪಟ್ಟಿದೆ ಕೆಟ್ಟ ಕೊಳಕುಗಳಿಂದ ತುಂಬಿದೆ ಕ್ರಿಮಿಗಳಿಂದ ಪೂರ್ಣವಾಗಿದೆ ಮಾಂಸದಿಂದ ಮೆತ್ತಲ್ಪಟ್ಟಿದೆ ಚರ್ಮದ ಹೊದಕೆಯುಳ್ಳದ್ದು ಯಾವಾಗಲೂ ಅಶುಚಿಯಾಗಿರುವಂತದ್ದು ದುರ್ಗಂಧವುಳ್ಳ ಕಶ್ಮಲ ತುಂಬಿದ ಅಶುಚಿಯಾದ ಸಡಿಲವಾಗಿ ಬಿದ್ದು ಹೋಗತಕ್ಕ ಸಾರವಿಲ್ಲದ ಇಂತಹ ಶರೀರದಲ್ಲಿ ಸತ್ಪುರುಷರು ಪ್ರೀತಿಯನ್ನು ಮಾಡುವುದಿಲ್ಲ ತಾನು ಮಾಡಿದ ಕರ್ಮವು ತನ್ನ ನೆರಳಿನಂತೆ ಕರ್ತೃವನ್ನು ಅನುಸರಿಸಿಕೊಂಡು ಹೋಗುತ್ತದೆ ಬೇರೆಯವರನ್ನಲ್ಲ
34:18 ಆದ್ದರಿಂದ ಜಿನಶಾಸನ ಮಾತ್ರ ಆಶ್ರಯವಲ್ಲದೆ ಅದನ್ನು ಬಿಟ್ಟು ಬೇರೆ ಕಡೆಗೆ ಓಡಿ ಹೋಗುವುದು ಅತ್ಯಂತ ಅಸಾಧ್ಯ ಎಲವು ಜ್ಞಾನಿಯೇ ಕೆಟ್ಟನಾಥ ತಾಳಲಾಗದ ದುಃಖ ಕೆಟ್ಟ ಸ್ವಭಾವಗಳುಳ್ಳ ನಾಶವುಳ್ಳ ನೋಡಲು ಅಸಹ್ಯವಾಗುವಂತಹ ಶರೀರದಲ್ಲಿ ನಿನ್ನ ಆಸಕ್ತಿ ವ್ಯರ್ಥ ಅಲ್ಲದೆ ಬೇರೆನು ನಾನು ಕತ್ತರಿಸಲಾಗದವನು ಕೊನೆಯೇ ಇಲ್ಲದ ಸುಖವುಳ್ಳವನು ಜ್ಞಾನಿ ಅನಾದಿ ಕರ್ಮಲೇಪನವಿಲ್ಲದವನು ಎಲ್ಲಾ ದುಃಖಗಳಿಗೂ ಆಸರಿಯಾಗಿರುವ ಈ ಶರೀರವನ್ನು ತೊರೆಯುತ್ತೇನೆ ಇದು ನಿಶ್ಚಯ ಈ ಜನ್ಮವೆಂಬ ಕಾಡು ಜಾತಿ ವೃಕ್ಷಗಳಿಂದ ಆವರಿಸಿದೆ ಯಮನಂತೆ ಕೋಪಗೊಂಡ ಕ್ರೂರವಾದ ಹೆಚ್ಚು ದುಷ್ಟ ಜಂತುಗಳಿಂದ ಕೂಡಿದೆ ರೋಗಗಳೆಂಬ ಜೇಡರ
35:07 ರೋಗಗಳೆಂಬ ಬೇಡರ ಭಯವುಳ್ಳದ್ದು ಅತಿ ಕಠಿಣ ಪಾಪಗಳೆಂಬ ಉಜ್ವಲವಾದ ಕಾಲ್ಗಿಚ್ಚಿನ ಹೊದಿಕೆಯುಳ್ಳದ್ದು ಅಂತಹ ಪೀಡಿತರಾದ ದೇಹಿಗಳಿಗೆ ಜಿನಶಾಸನವಂದೇ ಆಶ್ರಯ ಸ್ಥಾನವಾಗಿದೆ ಆದ್ದರಿಂದ ಯಾವಲ್ಲಿಯವರೆಗೆ ಈ ಶರೀರವು ಕ್ಷೇಮವಾಗಿ ರೋಗವಿಲ್ಲದೆ ಇರುವುದು ಮುಪ್ಪು ಎಲ್ಲಿಯವರೆಗೆ ಹತ್ತಿರ ಬರುವುದಿಲ್ಲವೋ ಇಂದ್ರಿಯಗಳ ಶಕ್ತಿ ಎಲ್ಲಿಯ ತನಕ ಕುಗ್ಗದೆ ಇರುವುದು ಎಲ್ಲಿಯವರೆಗೆ ಆಯಸ್ಸು ನಾಶವಾಗದೆ ಇರುವುದೋ ಅಷ್ಟರೊಳಗಾಗಿಯೇ ಬುದ್ಧಿವಂತನು ಅತ್ಯಂತ ಶ್ರೇಯ ಶ್ರೇಯಸ್ಸಿಗಾಗಿ ವಿಶೇಷ ಪ್ರಯತ್ನವನ್ನು ಮಾಡಬೇಕು ಮನೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಬಾವಿ ತೋಡುವ ಪ್ರಯತ್ನವು ಎಂತಹುದು ಎಂದು ಇವೇ ಮುಂತಾಗಿ ಉಳ್ಳ ನೀತಿಗಳನ್ನು ಉಚ್ಚರಿಸಿ ಅವುಗಳ ಅರ್ಥವನ್ನು
35:55 ಜನಸಮೂಹಕ್ಕೆಲ್ಲ ವ್ಯಾಖ್ಯಾನ ಮಾಡಿ ಹೇಳಿ ಮತ್ತೆ ಹೀಗೆಂದನು ನಾನು ಆಳತಕ್ಕವನು ರಾಜನು ಇವರೆಲ್ಲ ನನಗೆ ಸೇವಕರು ಹೀಗಿರುವಾಗ ಏನಾಗುತ್ತದೆ ಎಂದು ತಿಳಿದು ತಿಳಿಯದೆ ಲೆಕ್ಕಿಸದೆ ನಾನು ಹೇಳಿದ ಯಾವುದಾದರೂ ಒಂದು ಮಾತಿನ ವಿಷಯದಲ್ಲಿ ನಿಮಗೆ ಮನಸ್ಸಿನಲ್ಲಿ ಕೋಪವಿದ್ದರೂ ಆ ಮಾತನ್ನು ಮರೆತುಬಿಡಿ ಇನ್ನು ಮುಂದೆ ಎಲ್ಲವೂ ಪಾಪಾನುಷ್ಠಾನವಿಲ್ಲದಾಗಿ ಇರುವುದು ಎಲ್ಲಾ ಜೀವಿಗಳನ್ನು ಕ್ಷಮಿಸುತ್ತೇನೆ ಎಲ್ಲಾ ಜೀವಿಗಳು ನನ್ನನ್ನು ಕ್ಷಮಿಸಲಿ ಸರ್ವ ಪ್ರಾಣಿಗಳಲ್ಲಿಯೂ ನನಗೆ ಮೈತ್ರಿ ಇದೆ ಯಾರಲ್ಲಿಯೂ ನನಗೆ ವೈರವಿಲ್ಲ ಹೀಗೆ ನುಡಿದು ಎಲ್ಲರನ್ನು ಕ್ಷಮೆಗೊಳಿಸಿ ಮಾಯಾಶಲ್ಯ ಮಿಥ್ಯಾಶಲ್ಯ ನಿಧಾನ ಶಲ್ಯಗಳನ್ನು ಪರಿಹಾರಗೊಳಿಸಿದನು ತನ್ನ ಹಿರಿಯ ಮಗನಾದ ವಿದ್ಯುದಂಗನಿಗೆ
36:42 ರಾಜ್ಯದ ಆಕಾರ ಪಟ್ಟವನ್ನು ಕಟ್ಟಿ ರಾಜ್ಯಾಭಿಷೇಕವನ್ನು ಮಾಡಿದನು ನೀವೆಲ್ಲರೂ ಈತನನ್ನು ಆಶ್ರಯಗೊಂಡು ಸುಖವಾಗಿ ಬಾಳಿ ಎಂದು ಹೇಳಿ ಯಮದಂಡನಿಗೆ ಈ ಪಟ್ಟಣದ ತಳವಾರ ವೃತ್ತಿಯನ್ನು ಕೊಟ್ಟನು ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು ಪೂಜಾಗಜವನ್ನು ಹತ್ತಿದನು ಆಗ ಅವನ ಹೆಂಡಿರು ಸಂಗಡದಲ್ಲಿ ಬಂದರು ರಾಣಿವಾಸದ ಇಬ್ಬರು ದಾಸಿಯರು ಹಿಂದುಗಡೆ ಹತ್ತಿಕೊಂಡು ಎರಡು ಬದಿಗಳಲ್ಲಿಯೂ ಚಾಮರವನ್ನು ಬೀಯಿಸುತ್ತಾ ಬಂದರು. ಶ್ವೇತ ಛತ್ರಗಳು ಪಾಳಿಧ್ವಜಗಳು ಬಾವುಟಗಳು ಚಂದ್ರ ಸೂರ್ಯರು, ಸಿಂಹ, ಹುಲಿ, ಮೇನು ಎಂದು ಇವೇ ಮೊದಲಾಗಿ ಉಳ್ಳ ರಾಜ್ಯಾಕಾರದ ಚಿಹ್ನೆಗಳು ಅವರ ಮುಂದೆ ಹೋದವು ಶಂಖ ಪಟಹ ಮುಂತಾದ ಐದು ಬಗೆಯ
37:27 ಮಹಾವಾದ್ಯ ಶಬ್ದಗಳು ಮಂಗಳವಾದ್ಯಗಳು ಶಬ್ದ ಮಾಡಿದವು ಒಂದೇ ಮಾಗರು ಬೇಡುವವರು ದೀನರು ಅನಾಥರು ಕುರುಡರು ಇಂತವರಿಗೆಲ್ಲ ಸಂತೋಷವಾಗುವಷ್ಟು ದಾನವನ್ನು ಕೊಡುತ್ತ ವಿದ್ಯು ಚೋರನು ಸುಸರು ಕೂಟವೆಂಬ ಜಿನಾಲಯಕ್ಕೆ ಹೋಗಿ ಪಟ್ಟದಾನಿಯಿಂದ ಇಳಿದನು ಬಸದಿಗೆ ಮೂರು ಸುತ್ತು ಬಲಬಂದು ಅಂದರೆ ಸುತ್ತುಬಂದು ದೇವರಿಗೆ ವಂದನೆ ಸಲ್ಲಿಸಿದನು ಗುಣಧರರೆಂಬ ಆಚಾರ್ಯರನ್ನು ಗುರುಭಕ್ತಿಯಿಂದ ಸಂದರ್ಶಿಸಿ ನಮಸ್ಕರಿಸಿ ಹೇಗೆಂದರು ಪೂಜ್ಯರೇ ಸಂಸಾರವೆಂಬ ಸಮುದ್ರದಲ್ಲಿ ಮುಳುಗುತ್ತಿರುವ ನನ್ನನ್ನು ಮುಳುಗುವುದಕ್ಕೆ ಅವಕಾಶವಿಯದೆ ಎತ್ತಿರಿ ನನಗೆ ಜಿನದೀಕ್ಷೆಯನ್ನು ಅನುಗ್ರಹಿಸಿರಿ ಎಂದು ನುಡಿದು ಅವರು ದೀಕ್ಷೆ ಕೊಡಲು ಒಪ್ಪುವಂತೆ ಮಾಡಿದನು ಸಾವಿರ ಮಂದಿ
38:14 ರಾಜಕುಮಾರರು ಸಹಿತ ಬಳೆ ಉಡಿದಾರ ಕುಂಡಲ ಆಭರಣ ಮುಂತಾದುವನ್ನು ತೆಗೆದು ಹಾಕಿ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನೆಲ್ಲ ಬಿಟ್ಟು ಗುಣಾಧರ ಋಷಿಗಳ ಬಳಿ ತಪಸ್ಸನ್ನು ಸ್ವೀಕರಿಸಿದನು ಆಮೇಲೆ ಸುರಸ್ತ್ರೀಯರನ್ನು ಹೋಲತಕ್ಕ ಸೌಂದರಿ ಮಹಾದೇವಿ ಮುಂತಾದಏಳು ನೂರು ಮಂದಿ ರಾಣಿಯರು ಗುಣಧರ ಋಷಿಗಳನ್ನೇ ಗುರುಗಳಾಗಿ ಕಲ್ಪಿಸಿ ತಮ್ಮ ಅತ್ತೆಯವರಾದ ವಿಜಯಮತಿ ಕಂತಿಯವರೇ ತಮಗೆ ಮಾರ್ಗದರ್ಶನ ಮಾಡುವ ಸನ್ಯಾಸಿನಿಯ ಸನ್ಯಾಸಿನಿಯರಾಗಿರಲು ತಪಸ್ಸನ್ನು ಸ್ವೀಕರಿಸಿದರು ಅವರೆಲ್ಲರೂ ಸವೆದು ಸಣಕಲಾದ ದೇಹವನ್ನು ಗುಳಿಬಿದ್ದ ಕಣ್ಣುಗಳನ್ನು ಉಳ್ಳವರಾಗಿ ಉಗ್ರವು ಶ್ರೇಷ್ಠವು ಆದ ತಪಸ್ಸನ್ನು
39:02 ಆಚರಿಸುತ್ತ ಇದ್ದರು ಇತ್ತ ವಿದ್ಯುಚ್ಚೋರ ಋಷಿ 12 ವರ್ಷಗಳವರೆಗೆ ಗುರುಗಳನ್ನು ಅಗಲದೆ 12 ಅಂಗಗಳುಳ್ಳ ಮತ್ತು 14 ಪೂರ್ವಗಳುಳ್ಳ ಶಾಸ್ತ್ರಗಳನ್ನೆಲ್ಲ ಕಲಿತು ಅತ್ಯಂತ ಘೋರವಾದ ತಪಸ್ಸನ್ನು ಆಚರಣೆ ಮಾಡುತ್ತಾ ಆಚಾರ್ಯರಾದರು 500 ಮಂದಿ ಶಿಷ್ಯರನ್ನು ಕೂಡಿಕೊಂಡು ಗ್ರಾಮ ನಗರ ಖೇಡ ಕರವಡ ಮಡಂಬ ಪಟ್ಟಣ ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತಾ ಹೋದರು ಅವರು ಪೂರ್ವ ದೇಶದಲ್ಲಿ ಇರತಕ್ಕ ಖಾಳಿಮಂಡಳ ಎಂಬ ನಾಡಿನಲ್ಲಿ ತಾಮ್ರಲಿಪಿ ಎಂಬ ಪಟ್ಟಣದ ಹೊರಗಣ ಭಾಗಕ್ಕೆ ಹೋದರು. ಅಲ್ಲಿ ವರಂಗಾಯಿ ಎಂಬ ಉಗ್ರ ದೇವತೆ ಇದ್ದಳು. ಅವಳಿಗೆ ಆರು ತಿಂಗಳಿಗೊಮ್ಮೆ ಪ್ರತಿವರ್ಷವೂ ಬಿಡದೆ
39:50 ಜಾತ್ರೆಯಾಗುತ್ತಿತ್ತು. ಆ ಜಾತ್ರೆಗೆ ವಿಶೇಷವಾಗಿ ದುರ್ಗಾಷ್ಟಮಿ ಎಂದು ಜನರೆಲ್ಲ ಬಂದು ಸೇರಿ ಜಾತ್ರೆಯನ್ನು ಆಗ ಮಾಡುತ್ತಿದ್ದರು ಆ ದುರ್ಗಾದೇವತೆಗಳ ಆ ದುರ್ಗಾದೇವತೆ ಋಷಿಗಳು ಬಂದಿರುವುದನ್ನು ದೂರದಿಂದಲೇ ಕಂಡು ಇದಿರಿಗೆ ಹೋಗಿ ಹೀಗೆಂದಳು ನನ್ನ ಜಾತ್ರೆ ಕೊನೆಗೊಳ್ಳುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸದಿರಿ ಎಂದು ಆತಂಕ ಪಡಿಸಿದಳು ಆಗ ಋಷಿ ಶಿಷ್ಯರು ಪೂಜ್ಯರೇ ನಮ್ಮನ್ನು ಈ ದೇವತೆ ಏನು ಮಾಡುವಳು ನಾವು ಹೋಗೋಣ ಎಂದು ವಿದ್ಯಚೋರ ಮುನಿಯನ್ನು ಕೂಡಿಕೊಂಡು ದೇವತೆ ಅಡ್ಡಿಪಡಿಸಿದರು ಲೆಕ್ಕಿಸದೆ ಪಟ್ಟಣವನ್ನು ಹೊಕ್ಕರು ಆಗ ಋಷಿಗಳು ಆಗ ಆ ಋಷಿ ಶಿಷ್ಯರು ಪೂಜ್ಯರೇ
40:39 ನಮ್ಮನ್ನು ಈ ದೇವತೆ ಏನು ಮಾಡುವಳು ನಾವು ಹೋಗೋಣ ಎಂದು ವಿದ್ಯಚೋರ ಮುನಿಯನ್ನು ಕೂಡಿಕೊಂಡು ದೇವತೆ ಅಡ್ಡಿಪಡಿಸಿದರು ಲೆಕ್ಕಿಸದೆ ಪಟ್ಟಣವನ್ನು ಹೊಕ್ಕರು ಮತ್ತೆ ರಾತ್ರಿವೇಳೆ ವಿದ್ಯುಚ್ಚೋರ ಋಷಿಗಳು ಪಟ್ಟಣದ ಪಶ್ಚಿಮ ದಿಕ್ಕಿನ ಕೋಣೆಯ ಹೊರಗಿನ ಭಾಗದಲ್ಲಿ ಪ್ರತಿಮಾಯೋಗದಲ್ಲಿ ನಿಂತರು ವರಂಗಾಯಿ ದೇವತೆ ಆಗ ಕೋಪಗೊಂಡು ಪಾರಿವಾಳದಷ್ಟು ದೊಡ್ಡವುಗಳಾದ ಚಿಗಟಗಳನ್ನು ಗುಂಗುರುಗಳನ್ನು ಅಂದ್ರೆ ಆ ನೊಣಗಳನ್ನ ಸೊಳ್ಳೆ ನೊಣಗಳನ್ನ ಮಾಯೆಯಿಂದ ನಿರ್ಮಾಣ ಮಾಡಿದಳು ಅವು ವಿದ್ಯುತ್ಚೋರ ಋಷಿಗಳ ಶರೀರವನ್ನು ರಾತ್ರಿಯ ನಾಲ್ಕು ಜಾವ ಅಂದರೆ 12 ಗಂಟೆ ಸಮಯವು ಕಚ್ಚಿ ತಿನ್ನುತ್ತ ನರಕದ ಯಾತನಿಗಿಂತ
41:25 ನೋವನ್ನು ಉಂಟುಮಾಡುವ ಉಪಸರ್ಗಗಳನ್ನು ಮಾಡಿದವು ಅಂತಹ ದುಃಖವು ನೋವು ಮನಸ್ಸಿನಲ್ಲಿ ಇಲ್ಲದ ರೀತಿಯಲ್ಲಿ ಅವನ್ನು ಸಹಿಸಿಕೊಂಡು ಆಜ್ಞಾನಿ ವಿಚಯ ಅಪಾಯ ವಿಚಯ ವಿಪಾಕ ವಿಚಯ ಸಂಸ್ಥಾನ ವಿಚಯ ಎಂಬ ಈ ನಾಲ್ಕು ವಿಧವಾದ ಧರ್ಮ ಧ್ಯಾನವನ್ನು ಧ್ಯಾನಿಸಿದರು ಆಮೇಲೆ ಪ್ರತಕ್ತ್ವ ವಿತರ್ಕ ವಿಚಾರ ಎಂಬ ಮೊದಲಿನ ಶುಕ್ಲ ಧ್ಯಾನವನ್ನು ಧ್ಯಾನಿಸುತ್ತ ಕ್ಷಪಕ ಶ್ರೇಣಿಯನ್ನು ಏರಿ ಏಕತ್ವ ವಿತರ್ಕ ವಿಚಾರ ಸೂಕ್ಷ್ಮ ಕ್ರಿಯಾ ಸಮುಚ್ಚಿನ್ನ ಕ್ರಿಯಾ ನಿವೃತ್ತಿ ಎಂಬ ಶುಕ್ಲ ಧ್ಯಾನಗಳನ್ನು ಧ್ಯಾನಿಸಿ ಘಾತಿ ಕರ್ಮಗಳನ್ನು ನಾಶಗೊಳಿಸಿ ಅಂತರ್ಗತ ಕೇವಲಿಯಾಗಿ ಅಘಾತಿ ಕರ್ಮಗಳನ್ನು
42:12 ಕೆಡಿಸಿ ಮುಕ್ತಿಗೆ ಹೋದರು ಸನ್ಯಾಸವನ್ನು ಆಚರಿಸುತ್ತಿರುವ ಭವ್ಯರು ಹಾಗೂ ಶ್ರೇಷ್ಠವು ಶುದ್ಧವು ಸಹಜವು ಆದ ರತ್ನತ್ರಯವನ್ನು ಆರಾಸುವವರು ಅರಸುವವರು ವಿದ್ಯುತ್ಚೋರ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ದಂಡನೆಗಳನ್ನು ಯಾತನೆಗಳನ್ನು ರೋಗಗಳನ್ನು ನಾಲ್ಕು ವಿಧವಾದ ಉಪಸರ್ಗಗಳನ್ನು ಹಸಿವು ಬಾಯಾರಿಕೆ ಶೀತ ಉಷ್ಣ ವಾಯು ಸೊಳ್ಳೆ ನೊಣ ಮುಂತಾಗಿರುವ ಮುಂತಾಗಿರುವಂತಹ ಆಗತಕ್ಕ ಯಾತನೆಗಳನ್ನು ದುಃಖಗಳನ್ನು ಸಹಿಸಿಕೊಂಡು ಶ್ರೇಷ್ಠವು ಶುದ್ಧವು ಸಹಜವು ಆದ ರತ್ನತ್ರಯವನ್ನು ರತ್ನತ್ರಯ ಅಂದ್ರೆ ಸಮ್ಯಕ್ ದರ್ಶನ ಸಮ್ಯಜ್ಞಾನ ಸಮ್ಯಕ್ ಚಾರಿತ್ರ ಎನ್ನುವುದನ್ನ ಸಾಸಿ ಸ್ವರ್ಗ ಮೋಕ್ಷ ಸುಖಗಳನ್ನು
43:01 ಪಡೆಯಲಿ ಆತ್ಮೀಯರ ಮತ್ತು ವಿದ್ಯಾರ್ಥಿಗಳೇ ಶಿವಕೋಟ್ಯಾಚಾರ್ಯರು ರಚಿಸಿರುವ ವಡ್ಡಾರಾಧನೆಯಲ್ಲಿ ಬರುವಂತಹ 19 ಕಥೆಗಳಲ್ಲಿ ಒಂದಾದಂತಹ ವಿದ್ಯುತ್ ಚೋರನ ವಿದ್ಯುತ್ ಚೋರ ಎಂಬ ರುಚಿಯ ಕಥೆ ಇಲ್ಲಿಗೆ ಮುಕ್ತವಾಗ್ತದೆ. ಆತ್ಮೀಯರೇ ನೀವು ನನ್ನ ಚಾನೆಲ್ಗೆ ಇನ್ನೂ ಕೂಡ ಹೊಸಬರಾಗಿದ್ದಲ್ಲಿ ಸಬ್ಸ್ಕ್ರೈಬ್ ಮಾಡುವುದನ್ನ ಮರೆಯದಿರಿ ಹಾಗೆ ಒಂದು ಲೈಕ್ ಕೊಡಿ ಕಮೆಂಟ್ ಮಾಡಿ ಬೇರೆಯವರಿಗೂ ಕೂಡ ಇದನ್ನ ಶೇರ್ ಮಾಡಿ ಮುಂದೆ ಇನ್ನೊಂದು ಹೊಸ ಕಥೆಯೊಂದಿಗೆ ಮತ್ತೆ ಬರುತ್ತೇನೆ ಅಲ್ಲಿಯವರೆಗೆ ನಮಸ್ಕಾರ