ಕನ್ನಡ ಇಂಗ್ಲಿಷ್‌ ಸಾಕು | Two Langugage Policy | Karnataka | Hindi Kannada | MasthMagaa

Masth Magaa www.youtube.com

ಸಂಕ್ಷಿಪ್ತ ಸಾರಾಂಶ

ಈ ವೀಡಿಯೊವು ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಶಾಲಾ ಶಿಕ್ಷಣದಿಂದ ತೆಗೆದುಹಾಕುವ ಬಗ್ಗೆ ಚರ್ಚಿಸುತ್ತದೆ, ದ್ವಿಭಾಷಾ ನೀತಿಯನ್ನು ಜಾರಿಗೆ ತರುವ ಸರ್ಕಾರದ ಪ್ರಸ್ತಾಪದ ಬಗ್ಗೆ ವಿವರಿಸುತ್ತದೆ. ಇದು ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳು, ಅಧ್ಯಯನಗಳು ಮತ್ತು ರಾಜಕೀಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

  • ದ್ವಿಭಾಷಾ ನೀತಿಯನ್ನು ಜಾರಿಗೆ ತರಲು ಸರ್ಕಾರದ ಸಿದ್ಧತೆ.
  • ಹಿಂದಿ ಹೇರಿಕೆ ಮತ್ತು ಭಾಷಾ ನೀತಿಯಲ್ಲಿನ ರಾಜಕೀಯ.
  • ಮಕ್ಕಳ ಕಲಿಕೆಯ ಮೇಲೆ ಹೆಚ್ಚುವರಿ ಭಾಷೆಯ ಪರಿಣಾಮ.

ರಾಜ್ಯದಲ್ಲಿ ಹಿಂದಿ ಬ್ಯಾನ್: ಶಾಲೆಯಲ್ಲಿ ಎರಡೇ ಭಾಷೆ?

ಕರ್ನಾಟಕ ಸರ್ಕಾರವು ತಮಿಳುನಾಡು ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ತ್ರಿಭಾಷಾ ಸೂತ್ರವನ್ನು ತೆಗೆದುಹಾಕಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ರಾಜ್ಯ ಶಿಕ್ಷಣ ನೀತಿ ಆಯೋಗವು (ಎಸ್ಸಿಪಿ) ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ದ್ವಿಭಾಷಾ ನೀತಿಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ದ್ವಿಭಾಷಾ ನೀತಿ ಜಾರಿಗೆ ಒತ್ತಡ

ಕನ್ನಡಪರ ಸಂಘಟನೆಗಳು ಮತ್ತು ನಾಡು ನುಡಿ ವೇದಿಕೆಗಳು ತ್ರಿಭಾಷಾ ನೀತಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಹೆಚ್ಚುವರಿ ಭಾಷೆ ಕಲಿಯುವುದು ಮಕ್ಕಳಿಗೆ ಹೊರೆಯಾಗುತ್ತಿದೆ ಮತ್ತು ವಿಷಯ ಗ್ರಹಣೆಗೆ ಮೀಸಲಿಟ್ಟ ಸಮಯ ಕಡಿಮೆಯಾಗುತ್ತಿದೆ ಎಂದು ವಾದಿಸಲಾಗಿದೆ. ಮಹಾರಾಷ್ಟ್ರದಲ್ಲಿ ಹಿಂದಿ ಕಡ್ಡಾಯ ಮಾಡುವ ಪ್ರಯತ್ನ ವಿಫಲವಾದದ್ದು, ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ಒತ್ತಡ ಹೆಚ್ಚಿಸಿತು.

ಸರ್ಕಾರಕ್ಕೆ ಎಸ್ಸಿಪಿ ವರದಿ

ರಾಜ್ಯ ಶಿಕ್ಷಣ ನೀತಿ ಆಯೋಗವು ದ್ವಿಭಾಷಾ ನೀತಿಯನ್ನು ಜಾರಿ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೂರನೇ ಭಾಷೆಯಿಂದ ಮಕ್ಕಳಿಗೆ ಹೆಚ್ಚುವರಿ ಒತ್ತಡ ಉಂಟಾಗುತ್ತಿದೆ ಮತ್ತು ಇದು ಅವರ ಅರಿವಿನ ಕೌಶಲ್ಯಗಳಿಗೆ ಅಡ್ಡಿಯುಂಟುಮಾಡುತ್ತದೆ ಎಂದು ವರದಿ ಹೇಳಿದೆ. ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಮಾತ್ರ ಕಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ರಾಜಕೀಯ ಮತ್ತು ವಿರೋಧ

ಸಿದ್ದರಾಮಯ್ಯನವರು ಈ ಹಿಂದೆ ತ್ರಿಭಾಷಾ ನೀತಿಯನ್ನು ಬೆಂಬಲಿಸಿದ್ದರು, ಆದರೆ ಈಗ ದ್ವಿಭಾಷಾ ನೀತಿಗೆ ಬದ್ಧರಾಗಿದ್ದಾರೆ. ಖಾಸಗಿ ಶಾಲೆಗಳ ಒಕ್ಕೂಟ (ಕೆಎಎಂಎಸ್) ದ್ವಿಭಾಷಾ ನೀತಿಯನ್ನು ವಿರೋಧಿಸಿದೆ ಮತ್ತು ಇದು ಮಕ್ಕಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ವಾದಿಸಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ದ್ವಿಭಾಷಾ ನೀತಿಯನ್ನು ವಿರೋಧಿಸಿದ್ದಾರೆ.

ಅಧ್ಯಯನಗಳು ಏನು ಹೇಳುತ್ತವೆ?

ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ, ಮೂರು ಭಾಷೆಗಳನ್ನು ಕಲಿಯುವ ಮಕ್ಕಳು ಕೆಲವೊಮ್ಮೆ ನೆನಪಿನ ಶಕ್ತಿಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಎರಡು ಭಾಷೆಗಳನ್ನು ಕಲಿಯುವ ಮಕ್ಕಳಿಗಿಂತ ಕೆಟ್ಟದಾಗಿ ಪರ್ಫಾರ್ಮ್ ಮಾಡುತ್ತಾರೆ ಎಂದು 2017ರ ಅಧ್ಯಯನ ವರದಿ ಹೇಳಿದೆ. ಏಕೆಂದರೆ, ಮಕ್ಕಳ ಮೆದುಳಿನ ಡೆವಲಪಿಂಗ್ ಕೆಪಾಸಿಟಿಗಿಂತ ಹೆಚ್ಚಿನ ಒತ್ತಡ ಉಂಟಾಗುತ್ತದೆ.

ಭಾಷೆ ಒಂದು ಸಾಧನ

ಭಾಷೆ ಜ್ಞಾನವಲ್ಲ, ಅದು ಒಂದು ಸಾಧನ. ಎಲ್ಲಾ ಭಾರತೀಯ ಭಾಷೆಗಳಿಗೆ ಸಮಾನ ಗೌರವ ಮತ್ತು ಅವಕಾಶಗಳನ್ನು ನೀಡಬೇಕು. ಯಾವ ಭಾಷೆ ಉದ್ಯೋಗಾವಕಾಶಗಳನ್ನು ಮತ್ತು ಜೀವನವನ್ನು ಉತ್ತಮಗೊಳಿಸುತ್ತದೆಯೋ ಅದನ್ನು ಕಲಿಯಲು ಪ್ರೋತ್ಸಾಹಿಸಬೇಕು, ಆದರೆ ಯಾವುದೇ ಭಾಷೆಯನ್ನು ಕಡ್ಡಾಯ ಮಾಡಬಾರದು.

Summarize any YouTube video in seconds

Get summaries like this one for any video, in your language, with the free Summ app.

Download on the Apple Store
Get it on Google Play

Transcript

YouTube Transcript Generator

0:00 [ಸಂಗೀತ] ರಾಜ್ಯದಲ್ಲಿ ಹಿಂದಿ ಬ್ಯಾನ್ ಶಾಲೆಯಲ್ಲಿ ಎರಡೇ ಭಾಷೆ ವಿಭಾಷಾ ನೀತಿಗೆ ಸರ್ಕಾರ ಮಣೆ ನಮಸ್ಕಾರ ಸ್ನೇಹಿತರೆ ಹಿಂದಿ ಕಲಿಕೆ ದೇಶದಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗುತ್ತಿರು ವಿಚಾರ ಈಗ ಇಂತ ಹಿಂದಿಯನ್ನ ಕರ್ನಾಟಕದ ಶಾಲೆಗಳಲ್ಲೂ ಕೂಡ ಬ್ಯಾನ್ ಮಾಡೋಕೆ ಸರ್ಕಾರ ಮುಂದಾಗಿದೆ ತಮಿಳುನಾಡು ಮಹಾರಾಷ್ಟ್ರ ರೀತಿನೇ ತ್ರಿಭಾಷಾ ಸೂತ್ರವನ್ನ ತೆಗೆದು ಹಾಕಿ ದ್ವಿಭಾಷಾ ನೀತಿಯನ್ನ ಜಾರಿ ಮಾಡೋಕೆ ಹೆಜ್ಜೆ ಇಡ್ತೀವಿ ಅಂತ ಹೊರಟಿದ್ದಾರೆ ಈಗ ಆಲ್ರೆಡಿ ಈ ಸಂಬಂಧ ರಾಜ್ಯ ಶಿಕ್ಷಣ ನೀತಿ ಆಯೋಗ ಎಸ್ಸಪಿ ಸರ್ಕಾರಕ್ಕೆ ವರದೆ ಕೂಡ ರೆಡಿ ಮಾಡಿದೆ ಕುದ್ದು ಸಿಎಂ ಸಿದ್ದರಾಮಯ್ಯ ಕೂಡ ನಾವು ದ್ವಿಭಾಷಾ ನೀತಿಗೆ ಕಮಿಟ್ ಆಗಿದ್ದೀವಿ ಅನ್ನೋ ಹೇಳಿಕೆಯನ್ನ ಕೊಟ್ಟಿದ್ದಾರೆ ಸರ್ಕಾರದಲ್ಲಿ ಆಗ್ತಿರೋ ತಯಾರಿ ನೋಡಿದ್ರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನ ಆಗಬಹುದು ಅಂತ ಹೇಳಲಾಗ್ತಿದೆ ಹಾಗಿದ್ರೆ ಕೊನೆಗೂ

0:46 ಕರ್ನಾಟಕದಲ್ಲಿ ಹಿಂದಿಗೆ ಗೇಟ್ ಪಾಸ್ ಸಿಗತಾ ಇದೆಯಾ ಮಕ್ಕಳಿನ ಮೇಲೆ ಎರಡೇ ಭಾಷೆ ಓದಿದರೆ ಸಾಕಾ ಮೂರು ಅಥವಾ ಎರಡು ಮಕ್ಕಳು ಎಷ್ಟು ಭಾಷೆ ಕಲಿತರೆ ಒಳ್ಳೆಯದು ಈ ಬಗ್ಗೆ ಅಧ್ಯಯನಗಳು ಹೇಳುವುದೇನು ಬನ್ನಿ ಕರ್ನಾಟಕದ ಶಿಕ್ಷಣ ನೀತಿಯಲ್ಲಿ ಆಗ್ತಿರೋ ಈ ದೊಡ್ಡ ಬದಲಾವಣೆ ಬಗ್ಗೆ ನಾವು ಚರ್ಚೆ ಮಾಡ್ತಾ ಹೋಗೋಣ ಎರಡೇ ನುಡಿ ಸಾಕು ಸ್ನೇಹಿತರೆ ಹತ್ತಾರು ವರ್ಷಗಳಿಂದ ಕರ್ನಾಟಕದಲ್ಲಿ ಈ ಡಿಮಾಂಡ್ ಇದೆ ದಶಕಗಳಿಂದ ಇದೆ ಆದರೆ ಇತ್ತೀಚಿಗೆ ಕಳೆದ ಕೆಲ ತಿಂಗಳಿಂದ ಜಾಸ್ತಿಯಾಗಿದೆ ಈ ಕೂಗು ಕನ್ನಡ ಕನ್ನಡಿಗ ಕರ್ನಾಟಕ ವಿಚಾರಗಳನ್ನ ಮುನ್ನೆಲಗೆ ತರಬೇಕು ರಾಜಕೀಯ ವಲಯದಲ್ಲಿ ಕರ್ನಾಟಕದ ಹಿತಾಸಕ್ತಿಗಳಿಗೆ ಹೆಚ್ಚು ಮನ್ನಣೆ ಸಿಗಬೇಕು ಅಂತ ಹೊಸದಾಗಿ ಶುರುವಾಗಿರೋ ನಾಡು ನುಡಿ ನಮ್ಮ ಆಳ್ವಿಕೆ ವೇದಿಕೆ ಈ ವಿಚಾರವನ್ನ ಹೆಚ್ಚಾಗಿ ಪ್ರಚಾರ ಮಾಡ್ತಾ ಇತ್ತು ತ್ರಿಭಾಷಾ ನೀತಿಯಿಂದ ರಾಜ್ಯದ ವಿದ್ಯಾ ವಿದ್ಯಾರ್ಥಿಗಳಿಗೆ ಅನುಕೂಲ ಇಲ್ಲ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮತ್ತೊಂದು

1:32 ಭಾಷೆ ಕಲಿಬೇಕಾದ ಒತ್ತಡಕ್ಕೆ ಸಿಕ್ಕ ಹಾಕೊಂಡಿದ್ದಾರೆ ವಿಷಯ ಕಲಿಕೆಗೆ ಜ್ಞಾನ ಬೆಳಸೋಕೆ ಎರಡು ಭಾಷೆ ಸಾಕು ಇಲ್ಲ ಅಂದ್ರೆ ಈ ಎಕ್ಸ್ಟ್ರಾ ಭಾಷೆ ಕಲಿಯೋದೇ ಮಕ್ಕಳಿಗೆ ಹೊರೆಯಾಗಿ ಮಕ್ಕಳ ವಿಷಯ ಗ್ರಹಣೆಗೆ ಮೀಸಲಿಟ್ಟ ಟೈಮ್ ಕಮ್ಮಿಯಾಗುತ್ತೆ ಅಲ್ದೆ ಬೇರೆ ರಾಜ್ಯದಲ್ಲಿ ಜಾರಿಯಾಗದ ತ್ರಿಭಾಷಾ ಸೂತ್ರ ನಮ್ಮಲ್ಲಿ ಮಾತ್ರ ಯಾಕೆ ಅನ್ನೋ ಪ್ರಶ್ನೆ ಕೇಳಲಾಗಿತ್ತು ಖ್ಯಾತ ಗೀತ ರಚನೆಗಾರ ಕವಿರಾಜ್ ಹಿರಿಯ ಸಿನಿಮಾ ಪತ್ರಕರ್ತ ಶ್ಯಾಮ ಪ್ರಸಾದ್ ಸೇರಿ ಹಲವರು ಈ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ರು ಅನೇಕ ಕನ್ನಡಪರ ಸಂಘಟನೆಗಳು ಕೂಡ ಕ್ಯಾಂಪೇನ್ಗೆ ಕೈ ಜೋಡಿಸಿದರು ಜಿಲ್ಲೆ ಜಿಲ್ಲೆಗಳಲ್ಲಿ ಪಕ್ಷಾತಿತವಾಗಿ ರಾಜಕಾರಣಿ ಅಧಿಕಾರಿಗಳು ಹಾಗೂ ವಿಷಯ ತಜ್ಞರನ್ನ ಕರೆಸಿ ಚರ್ಚೆ ಅರಿವು ಜನಾಭಿಪ್ರಾಯ ಮೂಡಿಸುವ ಕೆಲಸ ನಡೆದಿತ್ತು ಹೀಗಾಗಿ ಕರ್ನಾಟಕದ ಅದ್ಯಂತ ದ್ವಿಭಾಷಾ ನೀತಿ ಜಾರಿಗೆ ದೊಡ್ಡ ಒತ್ತಡ ಸೃಷ್ಟಿಯಾಗಿತ್ತು ಇದರ ನಡುವೆ ಮಹಾರಾಷ್ಟ್ರದಲ್ಲೂ

2:19 ಕೂಡ ಹಿಂದಿ ಕಡ್ಡಾಯ ಮಾಡೋಕೆ ಹೋಗಿ ತ್ರಿಭಾಷಾ ಸೂತ್ರವನ್ನೇ ಕೈಬಿಡಬೇಕಾಗಿ ಬಂದಿದ್ದು ಈ ಒತ್ತಡವನ್ನ ಇನ್ನಷ್ಟು ಹೆಚ್ಚು ಮಾಡಿತ್ತು ಈಗ ಕೊನೆಗೂ ಸರ್ಕಾರ ಒತ್ತಡಕ್ಕೆ ಮಣಿದು ಹಿಂದಿಗೆ ಗೇಟ್ ಪಾಸ್ ಹೇಳೋಕೆ ಮುಂದಾಗ್ತಾ ಇದೆ. ದ್ವಿಭಾಷಾ ನೀತಿ ಜಾರಿ ಸರ್ಕಾರಕ್ಕೆ ಎಸ್ಸಿಪಿ ವರದಿ ರಾಜ್ಯ ಶಿಕ್ಷಣ ನೀತಿ ಆಯೋಗ ಎರಡು ನುಡಿ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣ ವಿಚಾರದಲ್ಲಿ ಸಲಹೆ ಸೂಚನೆ ಕೊಡು ಟಾಪ್ ಬಾಡಿ ಇದು ಮಾಜಿ ಯುಜಿಸಿ ಅಧ್ಯಕ್ಷ ಸುಖದೇವ್ ಥೋರಟ್ ಇದರ ಮುಖ್ಯಸ್ಥರು ಈಗ ಇಂತಹ ಸಂಸ್ಥೆ ದ್ವಿಭಾಷಾ ನೀತಿಯನ್ನ ಜಾರಿ ಮಾಡಿ ಅಂತ ಸರ್ಕಾರಕ್ಕೆ ರೆಕಮೆಂಡ್ ಮಾಡಿದೆ. ಮೂರನೇ ಭಾಷೆಯಿಂದ ಮಕ್ಕಳಿಗೆ ಹೆಚ್ಚುವರಿ ಒತ್ತಡ ಸೃಷ್ಟಿಯಾಗ್ತಾ ಇದೆ. ಇದರಿಂದ ಮಕ್ಕಳ ಕಾಗ್ನಿಟಿವ್ ಸ್ಕಿಲ್ಸ್ ಅಂದ್ರೆ ಅರಿವಿನ ಕೌಶಲ್ಯ ಅಥವಾ ಬೌದ್ಧಿಕ ಕೌಶಲ್ಯಕ್ಕೆ ಅಡ್ಡಿ ಉಂಟಾಗ್ತಾ ಇದೆ. ಹೀಗಾಗಿ ತಮಿಳುನಾಡು ತರ ಕರ್ನಾಟಕ ಸರ್ಕಾರ

3:04 ಕೂಡ ಸರ್ಕಾರಿ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲೀಷ್ ಮಾತ್ರ ಹೇಳಿಕೊಡಬೇಕು ಅಂತ ಹೇಳಿದೆ. ಅಲ್ದೆ ಈ ಸಂಬಂಧ ಒಂದು ರಿಪೋರ್ಟ್ ಕೂಡ ರೆಡಿ ಮಾಡಿದೆ. ಸದ್ಯ ಈ ರಿಪೋರ್ಟ್ನ ಇಂಗ್ಲಿಷ್ನಿಂದ ಕನ್ನಡಕ್ಕೆ ಟ್ರಾನ್ಸ್ಲೇಟ್ ಮಾಡೋ ಕೆಲಸ ನಡೀತಾ ಇದ್ದು. ಈ ವಾರಾಂತ್ಯದ ಒಳಗೆ ಸರ್ಕಾರಕ್ಕೆ ಸಲ್ಲಿಕೆಯಾಗೋ ನಿರೀಕ್ಷೆ ಇದೆ. ರಿಪೋರ್ಟ್ ಸಿಕ್ಕ ತಕ್ಷಣ ಸರ್ಕಾರ ಮುಂದಿನ ಹಂತದ ಪ್ರಕ್ರಿಯೆಗಳಿಗೆ ಚಾಲನೆ ಕೊಡಬಹುದು ಅಂತ ಹೇಳಲಾಗ್ತಿದೆ. ಯಾಕಂದ್ರೆ ಕುಂದು ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಇವಾಗ ಉತ್ಸುಕತೆ ತೋರಿಸ್ತಾ ಇದ್ದಾರೆ. ಕಳೆದ ವಾರ ಪ್ರೋಗ್ರಾಮ್ ಒಂದರಲ್ಲಿ ದ್ವಿಭಾಷಾ ನೀತಿ ಜಾರಿಗೆ ನಾನು ಕಮಿಟ್ ಆಗಿದ್ದೇನೆ ಇದು ನನ್ನ ಅಭಿಪ್ರಾಯ. ಆದರೆ ಇದನ್ನೇ ಸರ್ಕಾರದ ಅಭಿಪ್ರಾಯ ಮಾಡೋಕ್ಕೆ ಪ್ರಯತ್ನ ಪಡ್ತೀನಿ ದ್ವಿಭಾಷಾ ನೀತಿ ಜಾರಿಗೆ ಪ್ರಯತ್ನ ಪಡ್ತೀನಿ ಅನ್ನೋ ರೀತಿಯಲ್ಲಿ ಹೇಳಿಕೆಯನ್ನ ಕೊಟ್ಟಿದ್ರು ಸದ್ಯ ಸರ್ಕಾರದ ಮಟ್ಟದಲ್ಲಿ ಯಾರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜ್ಯ ಮಕ್ಕಳ ಹಿತ ಮತ್ತು ಭವಿಷ್ಯದ ದೃಷ್ಟಿಯಿಂದ ದ್ವಿಭಾಷಾ ನೀತಿ

3:50 ವಿಚಾರದಲ್ಲಿ ಮುಖ್ಯಮಂತ್ರಿಗಳ ಸಲಹೆಯಂತೆ ತೀರ್ಮಾನ ತಗೊಳ್ತೀವಿ ಅಂತ ಹೇಳಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಶಿವರಾಜ್ ತಂಗಡಗಿ ಕೂಡ ರಾಜ್ಯಕ್ಕೆ ದ್ವಿಭಾಷಾ ಸೂತ್ರ ಬೇಕು ಸಿಎಂ ಅಭಿಪ್ರಾಯವೇ ನನ್ನ ಒಪಿನಿಯನ್ ಅಂತ ಹೇಳಿದ್ದಾರೆ ಹೀಗಾಗಿ ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಬೇಗ ಜಾರಿಯಾಗುವ ಲಕ್ಷಣ ಷಣ ಇದೆ ಏನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸ್ಯಾಂಡ್ಸ್ ಟೂರಿಸಂ ಕಂಪನಿ ಪುರಿ ಜಗನ್ನಾಥ ಯಾತ್ರೆಯ ತ್ರೀ ನೈಟ್ ಫೋರ್ ಡೇ ಟ್ರಿಪ್ ಅನ್ನ ಆಯೋಜಿಸಿದೆ ಪುರಿ ಜಗನ್ನಾಥ ಕೋನಾರ್ಕ ಬಿರಾಜದೇವಿ ಶಕ್ತಿಪೀಠ ಭುವನೇಶ್ವರ ದೌಲಿ ಉದಯಗಿರಿ ಮತ್ತು ಸ್ಕಂದಗಿರಿ ಕಟಕ್ ಇಲ್ಲಿಗೆಲ್ಲ ಹೋಗೋದಿರುತ್ತೆ ಆಫರ್ ಪ್ರೈಸ್ ಕೇವಲ 29700 ರೂಪಾಯ ಮಾತ್ರ ಈ ಪ್ಯಾಕೇಜ್ನಲ್ಲಿ ಫ್ಲೈಟ್ ಟಿಕೆಟ್ಸ್ ತ್ರೀ ಸ್ಟಾರ್ ಹೋಟೆಲ್ನಲ್ಲಿ ಸ್ಟೇ ಆಲ್ ಮೇಲ್ಸ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ 247 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಹಾಗೂ ಹಿರಿಯ ನಾಗರಿಕರಿಗೆ

4:36 ವಿಶೇಷ ಆರೈಕೆ ಎಲ್ಲ ಇರುತ್ತೆ ಹೊರಡೋ ದಿನ ಆಗಸ್ಟ್ ಮೂರನೇ ತಾರೀಕು 2025 ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಆದರೆ ಸ್ನೇಹಿತರೆ ಇಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್ ಬಗ್ಗೆ ಒಂದು ವಿಚಾರವನ್ನ ಹೇಳಬೇಕು ಈ ದೇಶದಲ್ಲಿ ತ್ರಿಭಾಷಾ ನೀತಿಯ ಸೂತ್ರಧಾರರೇ ಕಾಂಗ್ರೆಸ್ನವರು ಈ ಹಿಂದಿನಿಂದಲೂ ಕೂಡ ನೆಹರು ಕಾಲದಿಂದಲೂ ಕೂಡ ಜೋರಾಗಿ ಇದನ್ನ ಜಾರಿ ಮಾಡ್ತಾ ಬಂದವರೇ ಕಾಂಗ್ರೆಸ್ನವರು ಕರ್ನಾಟಕದಲ್ಲೂ ಕೂಡ ದಶಕ ಗಳಿಂದ ಹಿಂದಿ ಹೇಳಿಕೊಡಲಾಗ್ತಾ ಇದೆ ಅಂತ ಹೇಳಿದ್ರೆ ಆಗ ಕರ್ನಾಟಕದಲ್ಲಿ ಆಂಧ್ರದಲ್ಲಿ ಇಲ್ಲೆಲ್ಲ ಕಾಂಗ್ರೆಸ್ ಸರ್ಕಾರ ಇತ್ತಲ್ಲ ಅವರದೇ ಕೆಲಸ ಇದೆ ಅಲ್ಲ ಹಿಂದಿಯನ್ನ ಪುಷ್ ಮಾಡಿರೋದು ತಮಿಳುನಾಡಿನಲ್ಲಿ ಕಾಂಗ್ರೆಸ್ ಇರಲಿಲ್ಲ ಇತ್ತೀಚಿನ ದಿನಗಳಲ್ಲಿ ಎರಡೇ ಭಾಷೆಯನ್ನ ಮಕ್ಕಳಿಗೆ ಹೇಳಿಕೊಡ್ತಿದ್ದಾರೆ ಉತ್ತರ ಭಾರತದಲ್ಲೂ ಕೂಡ ಕೆಲಕಡೆ ಐದೇ ಭಾಷೆ ಆರನೇ ಸಬ್ಜೆಕ್ಟ್ ಆಗಿ ಡ್ರಾಯಿಂಗ್ ಎಲ್ಲ

5:22 ಹೇಳಿಕೊಡ್ತಿದ್ದಾರೆ ನಮ್ಮ ಮಕ್ಕಳಿಗೆ ಮಾತ್ರ ಹಿಂದಿಯ ಹಿಂಸೆ ಹಿಂದಿ ಕಲಿಬೇಕು ಹಿಂದಿ ಕಲಿಬೇಕು ಅಂತ ರಾಷ್ಟ್ರೀಯ ಪಕ್ಷಗಳ ಕಿತಾಪತಿ ಇದು ಅದರಲ್ಲೂ ಕೂಡ ಈ ವಿಚಾರದಲ್ಲಿ ಪಿತಾಮಹ ಕಾಂಗ್ರೆಸ್ ಪಾರ್ಟಿನೇ 2013 ರಿಂದ 18ರ ತನಕ ಸಿದ್ದರಾಮಯ್ಯ ಅವರು ಸಿಎಂ ಆಗಿದ್ರು ಆವಾಗ ಇದರ ಬಗ್ಗೆ ಕಮ ಕಿಮಕ್ ಅಂದಿರಲಿಲ್ಲ ಅವರು ಇದಕ್ಕೆ ಸಪೋರ್ಟ್ ಮಾಡ್ಕೊಂಡು ಅದನ್ನ ಇಂಪ್ಲಿಮೆಂಟ್ ಮಾಡ್ಕೊಂಡು ಹೋಗಿದ್ರು ತೆಗಿಲಿಕ್ಕೆ ಕೈ ಹಾಕಿರಲಿಲ್ಲ ಈಗ ಹೋರಾಟ ಜಾಸ್ತಿ ಆಗ್ತಾ ಇದೆ ಅನ್ನೋ ಕಾರಣಕ್ಕೋಸ್ಕರ ಇದರ ಬಗ್ಗೆ ನಾವು ಕಮಿಟ್ ಆಗಿದ್ದೀವಿ ದ್ವಿಭಾಷಾ ಸೂತ್ರ ತರ್ತಾ ಇದ್ದೀವಿ ಅಂತ ಹೇಳಿದ್ದಾರೆ ಹೀಗಾಗಿ ಇಲ್ಲಿ ಪಾಲಿಟಿಕ್ಸ್ ಮಾಡಕ್ಕೆ ನಾವು ಜಾಸ್ತಿ ಬಿಡಬಾರದು ನಮಗೆ ಹಿಂದಿ ಕಲಿಯೋ ಅವಶ್ಯಕತೆ ಇಲ್ಲ ಸ್ನೇಹಿತರೆ ಕ್ಲಿಯರ್ ಕಟ್ ಒಪಿನಿಯನ್ ಏನು ಗೊತ್ತ ವಿಚಾರದಲ್ಲಿ ಈ ಬಗೆ ನೀತಿ ಏನು ಇಲ್ಲ ನಮಗೆ ಹಿಂದಿ ಕಲಿಯೋ ಅವಶ್ಯಕತೆ ಇಲ್ಲ ಎಕ್ಸ್ಟ್ರಾ ಲ್ಯಾಂಗ್ವೇಜ್ ಕಲಿತು ನಮಗೆ ಆಗಬೇಕಾಗಿರೋದು ಏನು ಕೂಡ ಇಲ್ಲ ನಮ್ಮ ಮಕ್ಕಳಿಗೆ ಹೊರೆ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳ ಮಕ್ಕಳು ಐದೇ ಸಬ್ಜೆಕ್ಟ್ ಓದ್ತಾರೆ ಬರ್ಡನ್

6:07 ಕಮ್ಮಿ ಆಗುತ್ತೆ ಅವರಿಗೆ ಕೆಲವು ಕಡೆ ಎಕ್ಸ್ಟ್ರಾ ನಿಮಗೆ ಆಲ್ರೆಡಿ ಹೇಳಿದಾಗೆ ಡ್ರಾಯಿಂಗ್ ಎಲ್ಲ ಇದೆ ನಮ್ಮ ಮಕ್ಕಳು ಹಿಂದಿ ಕಲಿಬೇಕು ಏನಕ್ಕೆ ಕಲಿಬೇಕು ಹಿಂದಿ ಕಲಿತು ಏನ್ ಮಾಡಬೇಕು ನಮ್ಮಲ್ಲಿ ಹಿಂದಿನ ಓಕೆ ಡ್ರಾಯಿಂಗ್ ಹೇಳಿಕೊಟ್ರೆ ಸ್ವಲ್ಪ ಎಕ್ಸ್ಟ್ರಾ ಸ್ಕಿಲ್ ಆಗುತ್ತೆ ಇನ್ನೊಂದು ಏನಾದ್ರೂ ಹೇಳಿಕೊಡಬಹುದು ಅದರ ಬದಲಿಗೆ ಬೇರೆ ಏನಾದ್ರೂ ತರಗತಿ ತಗೋಬಹುದು ಹಿಂದಿ ನಾಲೆಡ್ಜ್ ಅಲ್ವಲ್ಲ ಅದು ಹಿಂದಿ ಅನ್ನೋದಒಂದು ಭಾಷೆ ಎಕ್ಸ್ಟ್ರಾ ಎಕ್ಸ್ಟ್ರಾ ಎಕ್ಸ್ಟ್ರಾ ಯಾಕ ಬೇಕು ಅದು ಸುಮ್ನೆ ಎಕ್ಸ್ಟ್ರಾ ಮಾರ್ಕ್ಸ್ ಗಳಲ್ಲಿ ಬರಲ್ಲ ಅಂದ್ರೆ ಓಕೆ ಏನೋ ನಡೆಯುತ್ತೆ ಅಂತ ಹೇಳೋಣ ಕಲಿಯೋಣ ಬೇಕಾದ್ರೆ ಸುಮ್ನೆ ಸೈಡ್ ಅಲ್ಲಿ ಅಂತ ಮಾರ್ಕ್ಸ್ ಕಾರ್ಡ್ ಅಲ್ಲಿ ಬರುತ್ತೆ ಪರ್ಸೆಂಟೇಜ್ ಮೇಲೆ ಇಂಪ್ಯಾಕ್ಟ್ ಮಾಡುತ್ತೆ 10 ತನಕ ತಗೊಳ್ಳಲೇಬೇಕು ಅದಿಲ್ಲ ಅಂದ್ರೆ ಸಂಸ್ಕೃತ ತಗೋಬೇಕು ತಗೊಂಡು ಏನ್ ಮಾಡೋಣ ಸ್ವಾಮಿ ನಾವು ಸದ್ಯಕ್ಕೆ ನಮ್ಮ ಮಕ್ಕಳಿಗೆ ಅನ್ನೆಸೆಸರಿ ಬರ್ಡನ್ ಅಲ್ವಾ ಅದು ಮಾರ್ಕ್ಸ್ ಗೆ ಬರುತ್ತೆ ಪರ್ಸೆಂಟೇಜ್ಗೆ ಮ್ಯಾಟರ್ ಆಗುತ್ತೆ ಅಂತ ಹೇಳಿದ್ರೆ ಕಷ್ಟಪಟ್ಟು ಓದಲೇ ಬೇಕಾಗುತ್ತಲ್ಲ ಅವರು ಹಂಗೂ ಹೇಳಿಕೊಡಬೇಕಾ ನಿಮಗೆ ಎಲ್ಲಾ ಕಡೆ ಭಾರತದ ಎಲ್ಲಾ ಭಾಷೆಗಳನ್ನ ಹೇಳಿಕೊಡಿ ಉತ್ತರದಲ್ಲೂ ಕೂಡ ಕನ್ನಡ ತಮಿಳು ಮಲಯಾಳಂ ಎಲ್ಲ

6:54 ಹೇಳಿಕೊಡಿ ನೀವು ತೆಲುಗು ಎಲ್ಲ ಹೇಳಿಕೊಡಿ ನಮ್ಮಲ್ಲಿ ಸೌತ್ ಅಲ್ಲಿ ಹಿಂದಿ ಹೇಳಿಕೊಡಿ ಪರವಾಗಿಲ್ಲ ಮಾರ್ಕ್ಸ್ ಕಾರ್ಡಿ್ಗೆ ಸೇರಿಸಬೇಡಿ ಅದನ್ನ ಎಕ್ಸ್ಟ್ರಾ ಒಂದು ಈಗ ಈ ಫಿಸಿಕಲ್ ಎಜುಕೇಷನ್ ಎಲ್ಲ ಹೆಂಗೆ ಹೆಂಗೆ ಇಡ್ತೀರೋ ಹಂಗೆ ಇಡಿ ಲ್ಯಾಂಗ್ವೇಜ್ ಕಲ್ಚರಲ್ ಎಕ್ಸ್ಚೇಂಜ್ ತರ ಇಟ್ಕೊಳ್ಳಿ ಅದನ್ನ ಬಹಳ ಹಿಂಸೆ ಆಗುತ್ತಿಲ್ಲ ಅಂತ ಹೇಳಿದ್ರೆ ನಮ್ಮ ಮಕ್ಕಳಿಗೆ ಕೋರ್ಟ್ಗೆ ಹೋಗ್ತೀವಿ ಖಾಸಗಿ ಶಾಲೆಗಳ ಒಕ್ಕೂಟ ಎಸ್ ಸ್ನೇಹಿತರೆ ಕೆಲವರಿಂದ ಇದಕ್ಕೆ ವಿರೋಧ ಕೂಡ ಇದೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಕೆಎಎಂಎಸ್ ಇಂತ ಒಂದು ಬೆದರಿಕೆ ಹಾಕಿದೆ ಮಹಾರಾಷ್ಟ್ರದಲ್ಲಿ ಆಗ್ತಿರೋ ಬೆಳವಣಿಗೆ ನೋಡಿ ಕರ್ನಾಟಕ ನೀಜರ್ಕ್ ರಿಯಾಕ್ಷನ್ ಮಾಡಿದೆ ನಾವು ಹಿಂದಿ ಹೇರಿಕೆ ವಿರುದ್ಧ ಇದ್ದೀವಿ ಆದರೆ ಹಿಂದಿ ಸೇರಿದ ಹಾಗೆ ಮೂರನೇ ಭಾಷೆ ಕಲಿಯೋದ್ರಿಂದ ಮಕ್ಕಳ ಕಾಗ್ನಿಟಿವ್ ಸ್ಕಿಲ್ ಇಂಪ್ರೂವ್ ಆಗುತ್ತೆ ಅಂತ ಇವರು ವಾದ ಜೊತೆಗೆ ದ್ವಿಭಾಷಾ ನೀತಿ ತರತೀವಿ ನಾವು ಎರಡೇ ಭಾಷೆ ಆಪ್ಷನ್ ಕೊಡ್ತೀವಿ ಅಂತ ಹೇಳಿದ್ರೆ ಮಕ್ಕಳ ಮತ್ತು ಪೇರೆಂಟ್ಸ್ ಅವರ ಮೂಲಭೂತ ಹಕ್ಕುಗಳನ್ನೇ ಕಿತ್ುಕೊಂಡಂತ ಆಗುತ್ತೆ. ಹೀಗಾಗಿ ಸರ್ಕಾರ ದ್ವಿಭಾಷಾ ನೀತಿಗೆ ಏನಾದ್ರೂ ಮುಂದಾದರೆ ನಾವು

7:41 ಕಾನೂನಾತ್ಮಕವಾಗಿ ಫೈಟ್ ಮಾಡ್ತೀವಿ ಅಂತ ಖಾಸಗಿ ಶಾಲೆಗಳ ಒಕ್ಕೂಟ ಕೆಎಎಂಎಸ್ ನ ಜನರಲ್ ಸೆಕ್ರೆಟರಿ ಡಿ ಶಶಿಕುಮಾರ್ ಹೇಳಿದ್ದಾರೆ. ಅಲ್ದೇ ದ್ವಿಭಾಷಾ ನೀತಿಯಿಂದ 4ಸ000 ಉರ್ದು ಶಾಲೆ ಮತ್ತು ಶಿಕ್ಷಕರ ಜೀವನೋಪಾಯಕ್ಕೂ ಅಡ್ಡಿಯಾಗುತ್ತೆ ಜೊತೆಗೆ ಕರ್ನಾಟಕದಲ್ಲಿ ಅನ್ಯ ಭಾಷಿಕರು ಕೂಡ ಇದ್ದಾರೆ ಈ ಮಹಾನ್ಭಾವ 55% ಇದ್ದಾರೆ ಅಂತ ಹೇಳಿದ್ದಾರೆ 55% ಎಲ್ಲ ಎಲ್ಲಿದ್ದಾರೆ ಕರ್ನಾಟಕದಲ್ಲಿ ಸುಮ್ನೆ ಏನೋ ಒಂದು ಫಿಗರ್ ಹೇಳಿದ್ದಾರೆ ಇವರು ಸೋ ಇಷ್ಟಿದ್ದಾರೆ ಜಾಸ್ತಿ ಇದ್ದಾರೆ ಅವರಿಗೂ ಅವರವರ ಭಾಷೆ ಕಲಿಯೋ ಹಕ್ಕಿದೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ದ್ವಿಭಾಷಾ ನೀತಿ ಪ್ರಯತ್ನಕ್ಕೆ ವಿರೋಧಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದು ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಜಾರಿಗೆ ತಂದಲ್ಲಿ ಜ್ಞಾನದ ಕೊರತೆಯಿಂದ ಸಂವಹನದ ಸಮಸ್ಯೆ ಆಗುತ್ತೆ. ಈಗ ಆಲ್ರೆಡಿ ಹಿಂದಿ ಗೊತ್ತಿಲ್ಲದೆ ಸಂಸದರಿಗೆ ಮಾತನಾಡೋಕೆ ಸಮಸ್ಯೆ ಆಗ್ತಿದೆ. ಭಾಷೆ

8:28 ಅಭಿವ್ಯಕ್ತಿ ಮಾಧ್ಯಮ ಹೆಚ್ಚು ಭಾಷೆ ಕಲಿಯೋದ್ರಿಂದ ಮೆದುಳಿನ ಬೆಳವಣಿಗೆ ಚುರುಕಾಗುತ್ತೆ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅನ್ಯ ರಾಜ್ಯಗಳಲ್ಲಿ ಕೆಲಸ ಮಾಡೋಕೆ ಅನುಕೂಲ ಆಗುತ್ತೆ ರಾಷ್ಟ್ರೀಯ ಐಕ್ಯತೆ ಮೂಡುತ್ತೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ ಅಲ್ದೆ ರಾಜ್ಯಾಧ್ಯಂತ ಸರ್ಕಾರಿ ಶಾಲೆಗಳಲ್ಲಿ 15ಸಾವಿರ ಹಿಂದಿ ಶಿಕ್ಷಕರಿದ್ದಾರೆ ಈಗ ದಿಡೀರಂತ ಹಿಂದಿ ತೆಗೆದ್ರೆ ಅವರೆಲ್ಲ ಏನು ಮಾಡಬೇಕು ಅವರ ಜೀವನ ಬೀದಿಗೆ ಬರುತ್ತೆ ಅನ್ನೋ ಹೇಳಿಕೆಯನ್ನ ಕೊಟ್ಟಿದ್ದಾರೆ. ಅಧ್ಯಯನಗಳು ಹೇಳೋದೇನು? ಒಂದಕ್ಕಿಂತ ಹೆಚ್ಚು ಭಾಷೆ ಕಲಿಯೋದ್ರಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯ ಇಂಪ್ರೂವ್ ಆಗುತ್ತೆ ಡೌಟ್ ಇಲ್ಲ. ಅನೇಕ ಸ್ಟಡೀಸ್ ಕೂಡ ಇದನ್ನ ಹೇಳ್ತವೆ. 2009 ರಲ್ಲಿ ಮರಿಯಾನ ವೆಗಾ ಮೆಂಡೋ ನಡೆಸಿದ ಸ್ಟಡಿಯಲ್ಲಿ ಎರಡು ಭಾಷೆಗಿಂತ ಮೂರು ಭಾಷೆ ಕಲಿತ ಮಕ್ಕಳು ಕಾಗ್ನಿಟಿವ್ ಸ್ಕಿಲ್ಸ್ ಅಲ್ಲಿ ಸುಪೀರಿಯರ್ ಆಗಿ ಪರ್ಫಾರ್ಮ್ ಮಾಡಿದ್ರು. 2010ರ ಮತ್ತೊಂದು ಸ್ಟಡಿ ಪ್ರಕಾರ ಹೆಚ್ಚು ಭಾಷೆ ಕಲಿಯೋದ್ರಿಂದ ಮಕ್ಕಳ ಆ ಟೆನ್ಶನಲ್ ಕಂಟ್ರೋಲ್

9:15 ಅಂದ್ರೆ ಫೋಕಸ್ ಜಾಸ್ತಿ ಆಗುತ್ತೆ, ಡಿಸ್ಟ್ರಾಕ್ಷನ್ ನ ತಡೆಯೋ ಸಾಮರ್ಥ್ಯ ಹೆಚ್ಚಾಗುತ್ತೆ, ವರ್ಕಿಂಗ್ ಮೆಮೊರಿ ಇಂಪ್ರೂವ್ ಆಗುತ್ತೆ ಅನ್ನೋ ವಿಚಾರ ಬಂದಿತ್ತು. ಒಟ್ಟಾರೆ ಭಾಷಾ ವ್ಯವಸ್ಥೆ ಬಗ್ಗೆ ಮಕ್ಕಳು ಬ್ರಾಡರ್ ಲೆವೆಲ್ ಅಲ್ಲಿ ಅರ್ಥ ಮಾಡಿಕೊಳ್ತಾರೆ ಅನ್ನೋ ವಿಚಾರ ಬಂದಿತ್ತು. ಆದ್ರೆ ಇಲ್ಲಿ ಮಕ್ಕಳ ವರ್ಕ್ ಲೋಡ್ ಬಗ್ಗೆ ಗಮನ ಕೊಡಬೇಕಲ್ಲ ಅದಕ್ಕೆ ನಾವು ಆವಾಗ್ಲೇ ಹೇಳಿದ್ದು ಒಂದು ಫಿಸಿಕಲ್ ಎಜುಕೇಶನ್ ಎಕ್ಸ್ಟ್ರಾ ಕ್ಲಾಸ್ ಇರುತ್ತಲ್ಲ ಹಾಗೆ ಹೇಳಿಕೊಡ್ಲಿ ಎಲ್ಲ ಭಾರತೀಯ ಭಾಷೆಗಳನ್ನ ಕಲಿಯೋ ಅವಕಾಶ ಕೊಟ್ಟುಬಿಡ್ಲಿ ಆಲ್ ಓವರ್ ಇಂಡಿಯಾ ಕೊಟ್ಟುಬಿಡ್ಲಿ ಈಗ ಉತ್ತರ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಬಂದು ಬೆಂಗಳೂರಲ್ಲಿ ಕೆಲಸ ಮಾಡ್ತಾರಲ್ವಾ ಓಕೆ ಅಲ್ಲಿ ಹೋದಾಗ ಕನ್ನಡ ಬೇಕಾಗುತ್ತೆ ನಾನು ಕನ್ನಡ ತಗೊಳ್ತೀನಿ ಅಂತ ಕೇಳಿದ್ರೆ ಕೊಡೋಕೆ ಆಪ್ಷನ್ ಇರಲಿ ಅವರಿಗೆ ಕಲಿಲಿ ಅವರು ನಮ್ಮಲ್ಲೂ ಕೂಡ ಬೇಕಾದ್ರೆ ತಗೊಳ್ಳಿ ಓದ್ಲಿ ಮಕ್ಕಳು ಮಾರ್ಕ್ಸ್ ಕಾರ್ಡ್ಗೆ ಪರ್ಸೆಂಟೇಜ್ಗೆ ಆ ಸ್ಕೋರ್ ಆಡ್ ಆಗಬಾರದು ಎಕ್ಸ್ಟ್ರಾ ಆಕ್ಟಿವಿಟಿ ತರ ಇರಬೇಕು ಅದು ಅಲ್ವಾ ಕಮ್ಯುನಿಕೇಶನ್ಗೆ ಅದನ್ನ ಓದಿ ಮಾರ್ಕ್ಸ್ ತಗೊಂಡು

10:00 ಅದು ಪರ್ಸೆಂಟೇಜ್ಗೂ ರ್ಯಾಂಕ್ಗೂ ಅದೇ ಬರುತ್ತೆ ಅಂತ ಹೇಳಿದ್ರೆ ಹಿಂಸೆ ಅಲ್ವಾ ಮಕ್ಕಳಿಗೆ ಅದು ತ್ರಿಭಾಷಾ ನೀತಿ ಕುರಿತು 2017 ರಲ್ಲಿ ಪ್ರಕಟ ಆದ ಒಂದು ಸ್ಟಡಿ ರಿಪೋರ್ಟ್ ಪ್ರಕಾರ ಮೂರು ಭಾಷೆ ಓದ ಮಕ್ಕಳು ಕೆಲವೊಮ್ಮೆ ಮೆಮೊರಿ ಜನರಲೈಸೇಷನ್ ಟಾಸ್ಕ್ಸ್ ಅಂದ್ರೆ ನೆನಪಿನ ಶಕ್ತಿಗೆ ಸಂಬಂಧಪಟ್ಟ ಟಾಸ್ಕ್ ಗಳಲ್ಲಿ ಎರಡು ಭಾಷೆ ಓದಿದ ಮಕ್ಕಳಿಗಿಂತ ಕೆಟ್ಟದಾಗಿ ಪರ್ಫಾರ್ಮ್ ಮಾಡ್ತಾರೆ ಅಂತಾನೆ ಹೇಳಿದೆ ಯಾಕಂದ್ರೆ ಮಕ್ಕಳ ಕಾಗ್ನಿಟಿವ್ ಡಿಮ್ಯಾಂಡ್ಸ್ ಅವರ ಮೆದುಳಿನ ಡೆವಲಪಿಂಗ್ ಕೆಪಾಸಿಟಿಗಿಂತ ಹೆಚ್ಚಿರುತ್ತೆ ಅಂದ್ರೆ ಮಕ್ಕಳು ಮೂರು ಮೂರು ಭಾಷೆಯೊಂದಿಗೆ ಉಳಿದ ವಿಚಾರಗಳನ್ನ ಕೂಡ ಕಲಿಬೇಕಲ್ವಾ ಅವಾಗ ಪ್ರೆಷರ್ ಜಾಸ್ತಿ ಆಗುತ್ತೆ. ಜೊತೆಗೆ ಆ ಏಜ್ನಲ್ಲಿ ಆ ಒತ್ತಡ ತಾಳ್ಕೊಳ್ಳುವಷ್ಟು ಮಕ್ಕಳ ಮೆದುಳು ಕೂಡ ಡೆವಲಪ್ ಆಗಿರಲ್ಲ ಅಂತ ಸ್ಟಡಿ ಹೇಳಿದೆ. ಬಹುಶಃ ಇದೇ ಕಾರಣಕ್ಕೆ ವಿಶ್ವದೆಲ್ಲಡೆ ಬಹುತೇಕ ರಾಷ್ಟ್ರಗಳು ಪ್ರಾಥಮಿಕ ಹಂತದಲ್ಲಿ ಒಂದು ಭಾಷೆ ಅಥವಾ ಎರಡು ಭಾಷೆ ಮಾತ್ರ ಹೇಳಿಕೊಡ್ತಾರೆ. ಕೇವಲ ಭಾರತ ಪಾಕಿಸ್ತಾನ ದಕ್ಷಿಣ ಆಫ್ರಿಕಾ ಫಿಲಿಪೈನ್ಸ್ ನಂತ ಬೆರಳಣಿಕೆ ರಾಷ್ಟ್ರಗಳು ಮಾತ್ರ ತ್ರೀ ಲ್ಯಾಂಗ್ವೇಜ್ ಪಾಲಿಸಿ ಹೊಂದಿರೋದು ಸ್ನೇಹಿತರೆ

10:46 ಭಾಷೆ ನಾಲೆಡ್ಜ್ ಅಲ್ಲ ಅದೊಂದು ಟೂಲ್ ಸ್ನೇಹಿತರೆ ಲ್ಯಾಂಗ್ವೇಜ್ ಇಸ್ ನಾಟ್ ನಾಲೆಜ್ ಇಟ್ಸ್ ಎ ಟೂಲ್ ಇದನ್ನ ಅರ್ಥ ಮಾಡ್ಕೋಬೇಕು ನಾವು ಒಂದೇ ತರದ ಟೂಲ್ ಅನ್ನ ಬೇರೆ ಬೇರೆ ರೂಪದಲ್ಲಿ ಮೂರು ನಾಲ್ಕು ಐದಾರು ಕಲಿಯೋದ್ರಲ್ಲಿ ಅರ್ಥ ಏನಿದೆ ಅದು ಕೂಡ ಪರ್ಸೆಂಟೇಜ್ ಗೆ ಮಾರ್ಕ್ಸ್ ಕಾರ್ಡ್ಗೆ ಬರುತ್ತೆ ಅಂತ ಹೇಳಿದ್ರೆ ಅದರಲ್ಲಿ ಅರ್ಥ ಏನಿದೆ ಅನ್ನೋದು ನಮ್ಮ ಸ್ಟ್ರಾಂಗ್ ಕ್ವಶ್ಚನ್ ಸ್ನೇಹಿತರೆ ನೋಡಿ ಕಳೆದೆ ಎರಡು ವರ್ಷಗಳಲ್ಲಿ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಹಿಂದಿ ಸಬ್ಜೆಕ್ಟ್ ನಲ್ಲಿ 2.1 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎಕ್ಸ್ಟ್ರಾ ಭಾಷೆ ತಗೊಂಡಿದ್ದೆ ಹೊರೆಯಾಕಿದೆ ಅವರಿಗೆ ಹೀಗಾಗಿ ದ್ವಿಭಾಷಾ ನೀತಿಯ ಕೂಗು ದೊಡ್ಡದಾಗ್ತಾ ಇದೆ ರಾಷ್ಟ್ರೀಯ ಐಕ್ಯತೆ ಹೆಸರಲ್ಲಿ ದೊಡ್ಡತನ ತೋರಿದ್ದು ಆಕ್ಚುಲಿ ದಡ್ಡತನ ಅನ್ನೋದು ಸಾಬಿತ ಆಗ್ತಾ ಇದೆ ರಾಷ್ಟ್ರೀಯ ಐಕ್ಯತೆ ಅಂತ ಹೇಳಿದ್ರೆ ಎಲ್ಲಾ ಭಾರತೀಯ ಭಾಷೆಗಳಿಗೆ ಸಮಾನ ಗೌರವ ಕೊಟ್ಟು ಸಮಾನ ಅವಕಾಶಗಳನ್ನ ಕೊಡೋದು ಹಿಂದಿ ಕನ್ನಡ ನಮಗೆ ಹಿಂದಿಮೇಲೆ ಎಳ್ಳಿನ ಕಾಳಿನಷ್ಟು

11:32 ದ್ವೇಷ ಇಲ್ಲ ನಾವು ಅದನ್ನ ಪ್ರೀತಿಸ್ತೀವಿ ಕನ್ನಡನ್ನ ನಾವು ಇನ್ನು ಜಾಸ್ತಿ ಪ್ರೀತಿಸ್ತೀವಿ ನಮ್ಮ ಭಾಷೆ ಅನ್ನೋ ಕಾರಣಕ್ಕೋಸ್ಕರ ಆ ಉಳಿದಂತೆ ನಾವು ಹಿಂದಿಯನ್ನು ಪ್ರೀತಿಸ್ತೀವಿ, ತೆಲುಗುನ್ನು ಪ್ರೀತಿಸ್ತೀವಿ, ತಮಿಳನ್ನು ಪ್ರೀತಿಸ್ತೀವಿ, ಮಲಯಾಳಂ ಕೂಡ ಪ್ರೀತಿಸ್ತೀವಿ. ಬರದೇ ಇರೋ ನಮಗೆ ಅರ್ಥನೇ ಆಗದೇರೋ ನಾರ್ತ್ ಈಸ್ಟ್ ನ ಭಾಷೆಯನ್ನು ಕೂಡ ನಾವು ಪ್ರೀತಿಸ್ತೀವಿ. ಯಾಕಂದ್ರೆ ನಮ್ಮ ಭಾಷೆ ನಮ್ಮ ಭಾರತೀಯ ಭಾಷೆಗಳು ಅಂತ ನಮಗೆಲ್ಲದರ ಬಗ್ಗೆ ಗೌರವ ಇದೆ. ವಿದೇಶಿ ಭಾಷೆಗಳ ಮೇಲೆ ಕೂಡ ನಮಗೇನು ದ್ವೇಷ ಇಲ್ಲ. ಹಾಗಿರಬೇಕಾದ್ರೆ ಭಾರತೀಯ ಭಾಷೆಗಳನ್ನ ನಾವ್ ಯಾಕೆ ದ್ವೇಷಿಸೋಣ ನಮಗೇನು ದ್ವೇಷ ಇಲ್ಲ ಆದರೆ ಈಕ್ವಲ್ ಸ್ಥಾನಮಾನ ಇರಲಿ ಒಂದು ಭಾಷೆಯನ್ನ ಮಾತ್ರ ಜಾಸ್ತಿ ಹರಡೋ ಪ್ರಯತ್ನ ಯಾಕೆ ಎಲ್ಲರೂ ಎಲ್ಲಾ ಭಾಷೆನು ಕಲಿಯೋಣ ಆದರೆ ಮಾರ್ಕ್ಸ್ಗೆ ಅದು ಬೇಕೇ ಬೇಕು ಪರ್ಸೆಂಟೇಜ್ಗೆ ಅದು ಬೇಕೇ ಬೇಕು ಅನ್ನೋ ಪ್ರೆಷರ್ ಇಡಬೇಡಿ ಅನ್ನೋದು ನಮ್ಮ ಸಲಹೆ ಇಷ್ಟ ಇದ್ದವರು ಕಲಿಲಿ ಇಲ್ಲದೆ ಇದ್ದವರು ಬಿಡಲಿ ಅವರವರ ಇಷ್ಟ ಯಾವ ಭಾಷೆ

12:17 ಜಾಸ್ತಿ ಉದ್ಯೋಗಅವಕಾಶವನ್ನ ಮತ್ತು ಜೀವನವನ್ನ ಕೊಡುತ್ತೋ ಅದನ್ನ ಹುಡುಕಿ ಹುಡುಕಿ ಕಲಿತಾರೆ ತುಂಬಾ ಜನಕ್ಕೆ ಅನಿಸಿದ್ರೆ ಕನ್ನಡ ಕಲಿತರೆ ಬೆಂಗಳೂರಿಗೆ ಹೋದರೆ ಚೆನ್ನಾಗಿ ಆಗುತ್ತೆ ಅಂತ ಅನಿಸಿದ್ರೆ ಕಲಿಲಿ ಬೇರೆ ಭಾರತೀಯರು ಕೂಡ ಕನ್ನಡ ಕಲಿಲಿ ತಮಿಳ್ ಬಗ್ಗೆ ಹಂಗ ಅನ್ಿಸಿದ್ರೆ ತಮಿಳ್ ಕಲಿಲಿ ಅಥವಾ ಮರಾಠಿ ಬಗ್ಗೆ ಹಂಗ ಅನ್ಸಿದ್ರೆ ಮರಾಠಿ ಕಲಿಲಿ ಅಥವಾ ಹಿಂದಿ ಬಗ್ಗೆನೇ ಹಾಗೆ ಅನಿಸ್ತು ಅಂದ್ರೆ ಹಿಂದಿನೇ ಕಲಿಲಿ ಅದು ಅವರವರಿಗೆ ಬಿಟ್ಟಬಿಡಿ ಆಪ್ಷನ್ ಅಲ್ಲಿ ಬಿಟ್ಟಬಿಡಿ ಅದನ್ನ ಅದು ಯಾಕೆ ನೀವು ಫೋರ್ಸ್ ಮಾಡ್ತೀರಾ ಯಾಕೆ ತ್ರಿಭಾಷಾ ಸೂತ್ರದ ಅಡಿಯಲ್ಲಿ ಅದನ್ನೇ ತಗೊಳೋ ರೀತಿ ಫೋರ್ಸ್ ಯಾಕೆ ಮಾಡೋದು ಅದೇ ತಗೋಬೇಕು ಇಲ್ಲದರೆ ಸಂಸ್ಕೃತ ತಗೋಬೇಕು ಅಂತ ಹೇಳಿ ಕರ್ನಾಟಕದಲ್ಲಿ ಯಾಕೆ ಫೋರ್ಸ್ ಮಾಡೋದು ಅದನ್ನ ಪರ್ಸೆಂಟೇಜ್ಗೆ ಯಾಕೆ ಕೌಂಟ್ ಮಾಡ್ತೀರಾ ದೊಡ್ಡ ಅನ್ಯಾಯ ಅದು ಮಾಡಬೇಡಿ ಅನ್ನೋದು ನಮ್ಮ ಮನವಿ ಕೂಡ ಸ್ನೇಹಿತರೆನಿಮಗೆ ನಿಮಗೆ ಏನ ಅನ್ಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ ಮತ್ತೆ ಮತ್ತೆ ಭೇಟಿ ಆಗ್ತಿರೋಣ ನಮಸ್ತೆ

Share

YouTube Video Summaries